April 13, 2026
Monday, April 13, 2026
spot_img

CINE | ರಶ್ಮಿಕಾ-ವಿಜಯ್‌ ಫ್ಯಾನ್ಸ್‌ಗೆ ಕೊಟ್ಟ ಸ್ವೀಟ್‌ ಬಾಕ್ಸ್‌ನಲ್ಲಿ ಏನೆಲ್ಲಾ ಇದೆ? ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ಮದುವೆ ನಂತರವೂ ಸಿಕ್ಕಾಪಟ್ಟೆ ಖುಷಿ ಹಂಚುತ್ತಿದ್ದಾರೆ. ಭಾರತದ ಹಲವು ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಮಾಡಿದ ಜೋಡಿ, ಫ್ಯಾನ್ಸ್‌ಗೆ ಸಿಹಿ ಕೂಡ ಹಂಚಿದೆ.

ರಶ್ಮಿಕಾ ಹಾಗೂ ವಿಜಯ್‌ ಫೋಟೊ ಇರುವ ಸ್ವೀಟ್‌ಬಾಕ್ಸ್‌ ಇದಾಗಿದ್ದು, ಜನ ಮುಗಿಬಿದ್ದು ಇದನ್ನು ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ.

ಸ್ವೀಟ್‌ಬಾಕ್ಸ್‌ ಅಂದಮೇಲೆ ಸ್ವೀಟ್‌ ಬಿಟ್ಟು ಇನ್ನೇನು ಇರೋಕೆ ಸಾಧ್ಯ? ಮೂರು ನಾಲ್ಕು ಬಗೆಯ ಸಿಹಿ ಹಾಗೂ ಒಂದು ಕವರ್‌ನಲ್ಲಿ ಬೂಂದಿ ಖಾರ ನೀಡಿದ್ದಾರೆ.

ಹಲ್ವ, ಬರ್ಫಿ, ರಸಗುಲ್ಲವನ್ನು ನೀಡಲಾಗಿದೆ, ಜೊತೆಗೆ ಖಾರ ಕೂಡ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !