ಎಲ್ಲರಿಗೂ ಸ್ನೇಹಿತರು ಬೇಕೇಬೇಕು. ವಾಕಿಂಗ್ ಹೋಗುವ ಅಜ್ಜಿಗೆ ಪಕ್ಕದ ಮನೆಯ ಆಂಟಿಯೇ ಫ್ರೆಂಡ್. ಮನೆ ಮುಂದೆಯೇ ಕೂರುವ ತಾತನಿಗೆ ವಾಕಿಂಗ್ ಬರುವ ಅಂಕಲ್‌ಗಳೇ ಸ್ನೇಹಿತರು. ಪುಟಾಣಿಯಾಗಿದ್ದಾಗಿನಿಂದ ಸ್ನೇಹಿತರು ಬದಲಾಗ್ತಿದ್ದಾರೆಯೇ ಹೊರತು ಸ್ನೇಹ ಬದಲಾಗೋದಿಲ್ಲ.
ಶಾಲೆ, ಕಾಲೇಜುಗಳನ್ನು ಮಿಸ್ ಮಾಡ್ತೀವಿ ಅಂತ ಸ್ಟೂಡೆಂಟ್ಸ್ ಹೇಳೋದು ಯಾಕೆ? ಕಾಲೇಜು ಬೇಕು ಅಂತಲ್ಲ ಸ್ನೇಹಿತರು ಬೇಕು ಅಂತ. ಎಷ್ಟೋ ಮಂದಿ ಶಾಲೆಯಲ್ಲಿ ಸಿಕ್ಕ ಸ್ನೇಹಿತರನ್ನೇ ಕೊನೆಯವರೆಗೂ ಉಳಿಸಿಕೊಂಡು ಬರುತ್ತಾರೆ ಅವರು ಲಕ್ಕಿಜನ ಬಿಡಿ!
ಮದುವೆಯಾಗಿ, ಮಕ್ಕಳಾಗಿ, ಮೂವತ್ತು ದಾಟಿದ ನಂತರವೂ ಸ್ನೇಹಿತರನ್ನು ಉಳಿಸಿಕೊಳ್ಳೋದು ಬಹಳ ಕಷ್ಟ, ಹೊಸ ಸ್ನೇಹಿತರನ್ನು ಮಾಡಿಕೊಳ್ಳೋದು ಇನ್ನೂ ಕಷ್ಟ. ಅದರಲ್ಲಿಯೂ ಗರ್ಲ್ ಫ್ರೆಂಡ್‌ಶಿಪ್ ಬೆಸ್ಟ್. ಯಾಕೆ ಗೊತ್ತಾ?
ಯಾರೂ ಮ್ಯಾಚ್ ಮಾಡದಂತಹ ಎಮೋಷನಲ್ ಸಪೋರ್ಟ್ ಅವರು ಕೊಡುತ್ತಾರೆ. ಜೀವನದಲ್ಲಿ ಯಾವ ಸೀಕ್ರೆಟ್ ಹೇಳಿದರೂ ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಮನಸ್ಸನ್ನು ಹಗುರ ಮಾಡಿಕೊಳ್ಳಲು ಇದು ಸೇಫ್ ಜಾಗ.
ಸ್ಟಡಿ ಪ್ರಕಾರ ಸ್ನೇಹಿತೆಯರಿದ್ದ ಬಿಪಿ ಚೆನ್ನಾಗಿ ಇರುತ್ತದಂತೆ. ಹೃದಯ ಸಂಬಂಧಿ ಕಾಯಿಲೆಗಳೂ ಬರೋದಿಲ್ವಂತೆ.
ಹೆಣ್ಣುಮಕ್ಕಳು ಸದಾ ಒಬ್ಬರನ್ನೊಬ್ಬರು ತಿದ್ದುತ್ತಾರೆ. ನೀಟಾಗಿ ಇರುವುದನ್ನು ಇರುವಂತೆ ಹೇಳುತ್ತಾರೆ. ಜೀವನದ ದಿಕ್ಕನ್ನು ಬದಲಾಯಿಸುತ್ತಾರೆ.
ನಿಮ್ಮ ಸ್ನೇಹಿತೆಯರ ಜೊತೆ ಇರುವಾಗ ನೀವು ಖುಷಿಯಾಗಿ ಇರುತ್ತೀರಿ. ಇರುವಷ್ಟು ಹೊತ್ತೂ ಕಿಲಕಿಲ ನಗುತ್ತೀರಿ. ಇದು ನಿಮ್ಮ ಒತ್ತಡವನ್ನು ದೂರ ಮಾಡುತ್ತದೆ.
ಮಕ್ಕಳ ಬಗ್ಗೆ, ಗಂಡನ ಬಗ್ಗೆ, ಹಳೆಯ ಸ್ನೇಹಿತರ ಬಗ್ಗೆ ಹಾರ್ಮ್ ಆಗದ ಗಾಸಿಪ್ ಮಾಡಿ. ಮನಸ್ಸು ಹಗುರಾಗುತ್ತದೆ. ಜೀವನೋತ್ಸಾಹ ಕಾಣುತ್ತದೆ.



