ಏನೇನಿದೆ ಎಲ್ಲವನ್ನು ಬಿಚ್ಕೊಂಡು ನಿಂತ್ಕೊಳ್ಳಿ ಏನು ತೊಂದರೆ ಇಲ್ಲ: ಡಿಕೆಶಿ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ- ಜೆಡಿಎಸ್ ಪಾದಯಾತ್ರೆ 5ನೇ ದಿನವಾದ ಇಂದು ಮಂಡ್ಯ ಜಿಲ್ಲೆಯನ್ನು ತಲುಪಿತು. ಕುಮಾರಸ್ವಾಮಿ ವಿರುದ್ಧ ಹಗರಣಗಳನ್ನು ಬಿಚ್ಚಿಡುತ್ತೇನೆ ಎಂದು ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ ಅವರದ್ದು ಏನೇನಿದೆಯೋ ಕೆಲವು ಬಿಚ್ಕೊಂಡು ನಿಂತ್ಕೊಳಿ ಏನು ತೊಂದರೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಇಂದು ಪಾದಯಾತ್ರೆ ವೇಳೆ ಮಾತನಾಡಿದ ಅವರು, ಕೊಚ್ಚೆಗಳ ಬಗ್ಗೆ ಮಾತಾಡಬಾರದು ಅಂತ ಜನ ಸಲಹೆ ಕೊಡುತ್ತಾರೆ. ನಾನು ಮಾತನಾಡಬಾರದು ಅಂತಿದ್ದೆ. ನಿನ್ನೆ ಹೇಳಿಕೆ ಕುರಿತು ಒಂದು ವಿಡಿಯೋ ಪ್ಲೇ ಮಾಡಿದ್ದಾರೆ. ಅದಕ್ಕೆ ನಾನು ಸಿಡಿ ಶಿವು ಅಂತ ಹೇಳಿದ್ದು. ಎಲ್ಲೋಗುತ್ತೆ ವಿಡಿಯೋ ಬಿಡುವ ಚಾಳಿ ಎಂದು ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದರು.

ಹಿಂದೆ ನಿಮ್ಮ ಸಿದ್ದರಾಮಯ್ಯ ಕಾಂಗ್ರೆಸ್ ಬಗ್ಗೆ ಏನೆಲ್ಲ ಮಾತಾಡಿಲ್ಲ? ಅದನ್ನೆಲ್ಲ ಮರೆತಿದ್ದೀರಾ? ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಈ ಒಂದು ಹಗರಣಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಬೇಕಲ್ಲ. ಜನರಿಗೆ ರಾಜ್ಯದಲ್ಲಿ ಏನೇನು ನಡೆದಿದೆ ಸರ್ಕಾರದ ಆಸ್ತಿಗಳನ್ನ ಯಾವ ರೀತಿ ಲಪಟಾಯಿಸಿದ್ದಾರೆ ಆ ಒಂದು ವಿಷಯಗಳನ್ನು ಜನತೆಗೆ ತಿಳಿಸುವುದು ನಮ್ಮ ಜವಾಬ್ದಾರಿ. ಹಿಂದುಳಿದ ನಾಯಕರೇ ಹಿಂದುಳಿದವರ ಹೆಸರಿನಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾರೆ ಎಂದರು.

ಬಡವರ ಪರ ಕೆಲಸ ಮಾಡಬೇಕಿದ್ದ ಹಣ ಲೂಟಿಯಾಗಿದೆ. ಹಿಂದುಳಿದವರಿಗೆ ತಲುಪಿದ ಬೇಕಾದ ಹಣ ಲೂಟಿಯಾಗಿದೆ. ರಾಜ್ಯಪಾಲರನ್ನು ಯಾರು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಆಗಲ್ಲ. ರಾಜ್ಯಪಾಲರು ಸಂವಿಧಾನ ವ್ಯಾಪ್ತಿಯಲ್ಲಿ ಅಧಿಕಾರ ಚಲಾವಣೆ ಮಾಡುತ್ತಾರೆ. ಅವರಿಗೆ ಅಧಿಕಾರ ಇದೆ ಅದನ್ನು ಬಳಸಿಕೊಳ್ಳುತ್ತಾರೆ ಅಷ್ಟೇ.ಇನ್ನೂ ಎಚ್ ಡಿ ಕುಮಾರಸ್ವಾಮಿ ಅವರ ಕುರಿತು ಎಲ್ಲ ಹಗರಣಗಳ ಬಿಚ್ಚಿಡುತ್ತೇನೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಅವರದು ಏನೇನಿದೆ ಎಲ್ಲವನ್ನು ಬಿಚ್ಕೊಂಡು ನಿಂತ್ಕೊಳ್ಳಿ ಏನು ತೊಂದರೆ ಇಲ್ಲ ಎಂದು ತಿರುಗೇಟು ನೀಡಿದರು..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!