ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸ್ಟಾರ್ ವಿಶಾಲ್ ಅವರು ಸಿನಿಮಾಗಳಲ್ಲಿ ಸಖತ್ ಎನರ್ಜಿಯಾಗಿ ಕಾಣಿಸುತ್ತಾರೆ. ಅಲ್ಲದೇ ನಿಜ ಜೀವನದಲ್ಲೂ ಇನ್ನು ಯಂಗ್ ಆ್ಯಂಡ್ ಎನರ್ಜಿಯಾಗಿ ಕಾಣಿಸುತ್ತಾರೆ.
ಆದ್ರೆ ಇದೀಗ ವಿಶಾಲ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರಾ ಎನ್ನುವ ಪ್ರಶ್ನೆಗಳು ಮೂಡಿವೆ. ಇದು ನಿಜ ಎನ್ನುವಂತೆ ವಿಡಿಯೋವೊಂದು ಸಾಕ್ಷಿ ಹೇಳುತ್ತಿದೆ.
ನಟ ವಿಶಾಲ್ ಅವರು ಬಿಳಿ ಪಂಚೆ ಮತ್ತು ಶರ್ಟ್ ಧರಿಸಿ ತಮ್ಮ ಮುಂದಿನ ಚಿತ್ರ ಮದ ಗಜ ರಾಜ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದರು. ಆದರೆ ವೇದಿಕೆಯಲ್ಲಿ ಕೈಗಳು ನಡುಗುತ್ತಾ, ಮಾತನಾಡಲು ಕಷ್ಟಪಡುತ್ತಿರುವ ವಿಶಾಲ್ ಅವರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಅವರ ಕಣ್ಣುಗಳಲ್ಲಿ ನೀರು ತುಂಬಿ ಬರುವುದನ್ನೂ ಕಾಣಬಹುದು. ತೀವ್ರ ಅಸ್ವಸ್ಥರಾಗಿರುವ ವಿಶಾಲ್ ಅವರ ದೇಹವು ನಡುಗುತ್ತಿರುವುದನ್ನೂ ಕಾಣಬಹುದಾಗಿದೆ.
ಕಳೆದ ಕೆಲವು ದಿನಗಳಿಂದ ವಿಶಾಲ್ ತೀವ್ರ ಜ್ವರದಿಂದ ಬಳಲುತ್ತಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಈ ಆರೋಗ್ಯ ಸಮಸ್ಯೆ ಉಂಟಾಗಿದೆಯೆಂದು ಪ್ರಚಾರದ ವೇಳೆ ನಿರೂಪಕರು ಹೇಳಿದ್ದಾರೆ. ಅಸ್ವಸ್ಥರಾಗಿದ್ದರೂ ಚಿತ್ರದ ಪ್ರಚಾರಕ್ಕೆ ವಿಶಾಲ್ ಆಗಮಿಸಿದ್ದರು.
ವಿಶಾಲ್ ಅವರ ಮದಗಜ ರಾಜ ಎನ್ನುವ ಹೊಸ ಸಿನಿಮಾ ಕುರಿತು ಮಾಧ್ಯಮಗೋಷ್ಠಿ ನಡೆಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ವಿಶಾಲ್ ಅವರು ಮೈಕ್ ಹಿಡಿದುಕೊಂಡು ಮಾತಾಡುತ್ತಿರುವಾಗ ಅವರ ಕೈ ಎಲ್ಲ ಅಲುಗಾಡಿದೆ. ಮೈಕ್ ಅನ್ನು ಹಿಡಿದುಕೊಳ್ಳಲು ಆಗುತ್ತಿಲ್ಲ ಎನ್ನುವುದು ವಿಡಿಯೋದಿಂದ ತಿಳಿದು ಬರುತ್ತಿದೆ. ಅಲ್ಲದೇ ಮಾತನಾಡುವಾಗ ತೊದಲುತ್ತ ಮಾತನಾಡಿದ್ದಾರೆ. ಪದಗಳ ಉಚ್ಚಾರಣೆ ಕೂಡ ಸರಿಯಾಗಿ ಬಂದಿಲ್ಲ ಎನ್ನಲಾಗಿದೆ.
ಇನ್ನು ಯಂಗ್ ಆಗಿರುವ ವಿಶಾಲ್ ಅವರ ಆರೋಗ್ಯಕ್ಕೆ ಏನಾಗಿದೆ ಎನ್ನುವ ಪ್ರಶ್ನೆಗಳು ಮೂಡಿವೆ. ಆದರೆ ಅವರ ಆರೋಗ್ಯದ ಕುರಿತ ಯಾವುದೇ ಅಧಿಕೃತ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ. ಇಷ್ಟೇ ಅಲ್ಲದೇ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ಮದಗಜ ರಾಜ ಸಿನಿಮಾ 12 ವರ್ಷದ ಹಿಂದೆಯೇ ಅರ್ಧ ಶೂಟಿಂಗ್ ನಡೆದಿತ್ತು. ಕಾರಣಗಳಿಂದ ಸಿನಿಮಾ ಪೂರ್ಣ ಆಗಿರಲಿಲ್ಲ. ಆದರೆ ಈಗ ಶೂಟಿಂಗ್ ಪೂರ್ಣಗೊಂಡಿದ್ದು ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಸಿನಿಮಾದಲ್ಲಿ ವಿಶಾಲ್ ಜೊತೆ ನಟಿ ವರಲಕ್ಷ್ಮಿ ಶರತ್‌ಕುಮಾರ್, ಅಂಜಲಿ ನಟಿಸಿದ್ದಾರೆ. ನಟ ಆರ್ಯ ಕೂಡ ವಿಶೇಷ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಹಾಸ್ಯನಟ ಸಂತಾನಂ, ಬಾಲಿವುಡ್ ನಟ ಸೋನು ಸೂದ್, ಮಣಿವಣ್ಣನ್, ಮನೋಬಾಲಾ ಈ ಮೂವಿಯಲ್ಲಿ ಇದ್ದಾರೆ.