ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟಾ ಮಾಲಿಕತ್ವದಲ್ಲಿರುವ ವಾಟ್ಸ್ ಆಪ್ ನಲ್ಲಿ ಫೇಸ್ ಬುಕ್ ನಲ್ಲಿರುವ ಹೊಸ ಫೀಚರ್ ಅನ್ನು ಸೇರಿಸಲು ಫ್ಲಾನ್ ಮಾಡಲಾಗಿದೆ.
ಕವರ್ ಫೋಟೋಗಳು ಈಗಾಗಲೇ ಫೇಸ್ ಬುಕ್ ನಲ್ಲಿ ಹೆಚ್ಚಿನ ಆಕರ್ಷಣೆಗಳನ್ನು ಪಡೆದಿದ್ದು, ಬಳಕೆದಾರರ ವಿಭಿನ್ನ ಆಲೋಚನೆಗಳು, ಕೌಶಲ್ಯಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟಿದೆ. ಈಗ ಇದೇ ಫೀಚರ್ ವಾಟ್ಸ್ ಆಪ್ ಗೆ ಪದಾರ್ಪಣೆ ಮಾಡಲಿದೆ.
ಈ ಬಗ್ಗೆ ವಾಟ್ಸ್ ಆಪ್ ಬೀಟಾ ಇನ್ಫೋ ಮಾಹಿತಿ ಹಂಚಿಕೊಂಡಿದ್ದು, ಬ್ಯುಸಿನೆಸ್ ಅಕೌಂಟ್ ಗಳಲ್ಲಿ ಹೊಸ ಕ್ಯಾಮರಾ ಬಟನ್ ಅನ್ನು ನೀಡಲಿದ್ದು, ಇದರಲ್ಲಿ ಬಳಕೆದಾರರು ತಮ್ಮ ಕವರ್ ಫೋಟೋವನ್ನು ಆಯ್ಕೆ ಮಾಡಿ ಹಾಕಬಹುದಾಗಿದೆ.
ಇನ್ನು ಇದರಿಂದ ಕಾಂಟ್ಯಾಕ್ಟ್ ನಲ್ಲಿ ಇರುವ ವ್ಯಕ್ತಿಗಳು ತಮ್ಮ ಪ್ರೊಫೈಲ್ ಫೋಟೋ ಜತೆಗೆ ಕವರ್ ಫೋಟೋ ಹಾಗೂ ಸ್ಟೇಟಸ್ ಕೂಡ ನೋಡಬಹುದು.
ಸದ್ಯ ಇದನ್ನು ಪ್ರಾಯೋಗಿಕವಾಗಿ ಬ್ಯುಸಿನೆಸ್ ಅಕೌಂಟ್ ಗಳಿಗೆ ಮಾತ್ರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ಕಾರ್ಯನಿರ್ವಹಣೆ ನೋಡಿ ಎಲ್ಲಾ ಖಾತೆಗಳಿಗೂ ಬಿಡುಗಡೆ ಮಾಡಲಾಗುತ್ತದೆ.