ಹೊಸದಿಗಂತ ವರದಿ ಗದಗ:
ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಬಸ್ಸೊಂದು ಚಲುತ್ತಿದ್ದ ವೇಳೆಯಲ್ಲೇ ಬಸ್ಸಿನ ಚಕ್ರವು ಕಳಚಿ ಬಿದ್ದ ಘಟನೆ ತಾಲೂಕಿನಲ್ಲಿ ನಡೆದಿದೆ.
ಗದಗದಿಂದ ನರಗುಂದದ ಕಡೆಗೆ ಹೊರಟಿದ್ದ ಬಸ್ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ಸಂಚರಿಸುವ ವೇಳೆಯಲ್ಲಿ ಬಸ್‌ನ ಹಿಂಬದಿ ಚಕ್ರವು ಕಳಚಿ ಬಿದ್ದಿದೆ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿರುವ ಘಟನೆಯೊಂದು ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಸ್ ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ದಿಢೀರ್ ಕಳಚಿ ರಸ್ತೆಯ ಪಕ್ಕದಲ್ಲಿ ಬಿದ್ದಿದೆ.
ಬಸ್ ಹಿಂಬದಿ ಚಕ್ರ ಕಳಚಿ ಉರುಳಿ ಹೋಗುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾನೆ. ಇದರಿಂದ ಬಸ್‌ನಲ್ಲಿದ್ದ ಸುಮಾರು 50 ಜನ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.