ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮ್ಮ ಒಲೆ ಮುಂದೆ ನಿಂತು ಅಡುಗೆ ಮಾಡಿದ್ರೆ ಅಪ್ಪ ಕೆಳಗೆ ಕುಳಿತು ಕಾಯಿ ತುರಿದುಕೊಡ್ತಾರೆ, ಅಪ್ಪ ಪಡ್ಡು ಮಾಡ್ತಿದ್ರೆ ಅಮ್ಮ ಮಗಳು ಜಡೆ ಹಾಕ್ತಾಳೆ. ಯಾವ ಕೆಲಸವೂ ಯಾವುದೇ ಜೆಂಡರ್‌ಗೆ ಸೀಮಿತ ಅಲ್ಲ. ಅಡುಗೆ ಅನ್ನೋದು ಬೇಸಿಕ್ ಸ್ಕಿಲ್, ಮನುಷ್ಯರ ತಮಗಾಗಿ ಕಲಿಯಬೇಕಾದ ವಿಷಯ ಅಷ್ಟೆ..
ಈ ರೀತಿ ತಂದೆ ತಾಯಿ ಒಂದೇ ಎನ್ನುವ, ಅದರಲ್ಲಿಯೂ ಗಂಡು-ಹೆಣ್ಣು ಎಂಬ ಬೇಧ ಏನಿಲ್ಲ ಎಂದು ತೋರುವ ಚಿತ್ರಗಳು ಕೇರಳದ ಮಕ್ಕಳ ಪಠ್ಯಪುಸ್ತಕದಲ್ಲಿದೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನಮ್ಮ ರಾಜ್ಯದಲ್ಲಿಯೂ ಈ ರೀತಿ ಫೋಟೊಗಳನ್ನು ಬಳಕೆ ಮಾಡಿ ಮಕ್ಕಳಿಗೆ ಅರ್ಥ ಮಾಡಿಸಬೇಕು ಎಂಬ ಕೂಗು ಕೇಳಿಬಂದಿದೆ.
ಚಿಕ್ಕ ವಯಸ್ಸಿನಿಂದಲೇ ಲಿಂಗ ಸಮಾನತೆಯ ಬಗ್ಗೆ ಮಾಹಿತಿ ನೀಡುವುದು, ಮನೆಗಳಲ್ಲಿ ಜವಾಬ್ದಾರಿ ಹಂಚಿಕೆಯನ್ನು ಪ್ರೋತ್ಸಾಹ ಮಾಡುವುದು ಇದರ ಉದ್ದೇಶವಾಗಿದೆ. ಹುಡುಗಿಯರು ಫುಟ್ಬಾಲ್ ಆಡುವ ಚಿತ್ರಗಳು, ಹುಡುಗ-ಹುಡುಗಿ ಎಲ್ಲರೂ ಸೇರಿ ಅಡುಗೆ ಮನೆಯಲ್ಲಿ ಇರುವ ಫೋಟೊಗಳು ಪುಸ್ತಕದಲ್ಲಿ ಇವೆ.