ಮುಂಬೈ ಇಂಡಿಯನ್ಸ್‌ಗೆ ಬುಮ್ರಾ ಎಂಟ್ರಿ ಯಾವಾಗ? ಹೆಡ್‌ ಕೋಚ್‌ ಏನು ಅಂತಾರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

IPL 2025 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಅಭಿಯಾನ ಆರಂಭಿಸಿದ್ದು, ತನ್ನ ಮೊದಲನೇ ಪಂದ್ಯದಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರ ಸೇವೆಯನ್ನು ಕಳೆದುಕೊಂಡಿತ್ತು. ಆದರೆ, ಎರಡನೇ ಪಂದ್ಯಕ್ಕೆ ಹಾರ್ದಿಕ್‌ ಪಾಂಡ್ಯ ಲಭ್ಯರಾಗಿದ್ದಾರೆ.

ಆದರೆ, ವೇಗಿ ಜಸ್‌ಪ್ರೀತ್‌ ಬುಮ್ರಾ ಯಾವಾಗ ಟೀಮ್ ಗೆ ಮರಳುತ್ತಾರೆ ಎಂಬುದರ ಕುರಿತು ಹೆಡ್‌ ಕೋಚ್‌ ಮಹೇಲಾ ಜಯವರ್ದನೆ ಬಹಿರಂಗಪಡಿಸಿದ್ದಾರೆ.

ಬುಮ್ರಾ ಅವರು ಸದ್ಯ ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಪ್ರಕ್ರಿಯೆ ಉತ್ತಮವಾಗಿದೆ. ಆದರೆ, ಅವರು ಯಾವಾಗ ಮರಳಲಿದ್ದಾರೆಂಬ ಬಗ್ಗೆ ಖಚಿತತೆ ಇಲ್ಲ ಎಂದಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಅವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ತಂಡಕ್ಕೆ ಲಭ್ಯರಾಗಿದ್ದಾರೆ. ಅವರು ಪ್ರತಿನಿತ್ಯ ತಮ್ಮ ಪ್ರಕ್ರಿಯೆಯಲ್ಲಿ ಮುಂದುವರಿಯುತ್ತಿದ್ದಾರೆ. ಅವರು ಎಲ್ಲಾ ರೀತಿಯಲ್ಲಿ ಉತ್ತಮವಾಗಿ ಸಾಗುತ್ತಿದ್ದಾರೆ. ಆದರೆ, ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆಂಬ ಬಗ್ಗೆ ಎನ್‌ಸಿಎ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಇದಕ್ಕಾಗಿ ನಾವು ಕಾಯಬೇಕಾಗುತ್ತದೆ ಎಂದು ಮಹೇಲಾ ಜಯವರ್ದನೆ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಕೊನೆಯ ಬಾರಿ ಆಡಿದ್ದರು. ಕೆಳ ಬೆನ್ನು ಭಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಿಂದ ಬುಮ್ರಾ ಹೊರ ಬಿದ್ದಿದ್ದರು. ಅಷ್ಟೇ ಅಲ್ಲದೆ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಿಂದ ಜಸ್‌ಪ್ರೀತ್‌ ಬುಮ್ರಾ ಹೊರಬಿದ್ದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!