September 13, 2026
Sunday, September 13, 2026
spot_img

ಸಿಕ್ಕಾಪಟ್ಟೆ ತಲೆನೋವಿದ್ದಾಗ ಮಾತ್ರೆ ಬೇಡ, ಒಂದು ದೊಡ್ಡ ಲೋಟ ಕಾಫಿ ಕುಡಿದರೆ ಸಾಕು! ಇದು ಸತ್ಯವಾ?

ಕೆಲಸದಲ್ಲಿ ಒತ್ತಡ ಹೆಚ್ಚಾದಾಗ, ಊಟ ತಿಂಡಿ ತಿನ್ನದೇ ಇದ್ದಾಗ ಇನ್ನಿತರ ಕಾರಣಗಳಿಂದ ತಲೆನೋವು ಬರೋದು ಸಾಮಾನ್ಯ. ಆದರೆ ಈ ತಲೆನೋವನ್ನು ಓಡಿಸೋಕೆ ಪದೇ ಪದೆ ಮಾತ್ರೆ ಕುಡಿಯೋದನ್ನು ಹಲವರು ಇಷ್ಟಪಡೋದಿಲ್ಲ. ವಾರಕ್ಕೆ ನಾಲ್ಕು ಬಾರಿ ತಲೆನೋವು ಬಂದರೆ ಪ್ರತೀ ಬಾರಿಯೂ ಮಾತ್ರೆ ಕುಡಿಯೋದಕ್ಕೆ ಆಗುತ್ತದಾ? ಇದರಿಂದ ಕಿಡ್ನಿ ಹಾಳಾಗುತ್ತದೆ ಅನ್ನೋದು ಹಲವರ ಕನ್ಸರ್ನ್‌. ಇದೇ ಕಾರಣಕ್ಕೆ ಈ ಜನ ಕಂಡುಕೊಂಡ ಔಷಧ ಅಂದ್ರೆ ಒಂದು ಕಪ್‌ ಬಿಸಿ ಬಿಸಿ ಫಿಲ್ಟರ್‌ ಕಾಫಿ!

ಹೌದು, ಕಾಫಿಯಲ್ಲೇನೋ ಮ್ಯಾಜಿಕ್‌ ಇದೆ. ಆಫೀಸ್‌ ಬಿಟ್ಟು ಕ್ಯಾಂಟೀನ್‌ ಕಡೆ ಹೋಗಿ ಒಂದು ಲೋಟ ಬಿಸಿ ಕಾಫಿ ಕುಡಿದುಬಿಟ್ಟರೆ ಆಯ್ತು ತಲೆನೋವೆಲ್ಲ ಮಾಯ. ಇದು ನಿಜವಾ? ಎಲ್ಲರಿಗೂ ವರ್ಕ್‌ ಆಗುತ್ತದಾ?

ಕಾಫಿ ನಿಮ್ಮ ತಲೆನೋವನ್ನು ಕಡಿಮೆ ಮಾಡುತ್ತದೆ ಅನ್ನೋ ವಿಷಯ ಸತ್ಯವಾದ್ದು. ನಿಮ್ಮ ಬ್ಲಡ್‌ ವೆಸಲ್‌ಗಳನ್ನು ನಿಯಂತ್ರಣಕ್ಕೆ ತಂದು ತಲೆನೋವು ಕಡಿಮೆಯಾಗುವಲ್ಲಿ ಇವು ಸಹಾಯ ಮಾಡುತ್ತದೆ. ನೀವೇನಾದರೂ ಕೆಫೀನ್‌ ಸೇವನೆ ಮಾಡಿದ ನಂತರ ತಲೆನೋವಿನ ಮಾತ್ರ ತೆಗೆದುಕೊಂಡರೆ ತಲೆನೋವು ಶೀಘ್ರದಲ್ಲೇ ಕಡಿಮೆಯಾಗುತ್ತದೆ.

ಟೀ ಮತ್ತು ಕಾಫಿಯಲ್ಲಿ ಇರುವ ಕೆಫೀನ್ ಕೆಲವರಲ್ಲಿ ತಲೆನೋವು ಅಥವಾ ಮೈಗ್ರೇನ್‌ನಿಂದ ತಾತ್ಕಾಲಿಕ ಪರಿಹಾರ ನೀಡಬಹುದು. ಈ ಕಾರಣದಿಂದಲೇ ಕೆಲವು ತಲೆನೋವಿನ ಔಷಧಿಗಳಲ್ಲಿಯೂ ಕ್ಯಾಫೀನ್ ಬಳಸಲಾಗುತ್ತದೆ. ಆದರೆ ಇದರ ಪರಿಣಾಮ ಎಲ್ಲರಲ್ಲೂ ಒಂದೇ ರೀತಿಯಾಗಿರುವುದಿಲ್ಲ. ಮಿತ ಪ್ರಮಾಣದ ಕ್ಯಾಫೀನ್ ಕೆಲವರಿಗೆ ನೋವು ಕಡಿಮೆ ಮಾಡಬಹುದು. ಕೆಲವೊಮ್ಮೆ ಪ್ರತಿದಿನ ಹೆಚ್ಚು ಕ್ಯಾಫೀನ್ ಸೇವಿಸುವವರಲ್ಲಿ ತಲೆನೋವು ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನೇನು ಮಾಡಬಹುದು?

ಹೆಚ್ಚು ನೀರು ಕುಡಿಯಿರಿ, ಕತ್ತಲೆಯ ರೂಮಿನಲ್ಲಿ ಎರಡು ಗಂಟೆ ನಿದ್ದೆ ಮಾಡಿ, ಫೋನ್‌, ಲ್ಯಾಪ್‌ಟಾಪ್‌ನಿಂದ ದೂರ ಇರಿ. ನಿತ್ಯವೂ ಉತ್ತಮ ನಿದ್ದೆಯ ಬಗ್ಗೆ ಫೋಕಸ್‌ ಮಾಡಿ. ನಿಮಗೆ ಯಾವ ವಿಷಯಗಳಿಂದ ತಲೆನೋವು ಟ್ರಿಗರ್‌ ಆಗುತ್ತದೋ ಅದನ್ನು ಅವಾಯ್ಡ್‌ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !