ಹೊಸದಿಗಂತ ಡಿಜಿಟಲ್ ಡೆಸ್ಕ್:
IPL 27ನೇ ಪಂದ್ಯದ ವೇಳೆ ತಮಾಷೆಯ ಘಟನೆಯೊಂದು ನಡೆದಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಇನಿಂಗ್ಸ್ ವೇಳೆ ಆಟಗಾರ ಪ್ರಭ್ಸಿಮ್ರಾನ್ ಬಾರಿಸಿದ ಸ್ಟ್ರೈಟ್ ಹಿಟ್ ಅನ್ನು ಇಶಾನ್ ಕಿಶನ್ ಓಡಿ ಹೋಗಿ ತಡೆದಿದ್ದರು. ಆದರೆ ಚೆಂಡು ತಡೆದ ಬಳಿಕ ಅವರು ಬಾಲ್ಗಾಗಿ ಹುಡುಕಾಡಿದ್ದು ಬಹಳ ತಮಾಷೆಯಾಗಿತ್ತು. ಚೆಂಡು ಜಾಹೀರಾತು ಬರಹಗಳ ಮೇಲೆ ನಿಂತಿದ್ದರಿಂದ ಇಶಾನ್ ಕಿಶನ್ಗೆ ಬಾಲ್ ಕಾಣಲಿಲ್ಲ.
ಚೆಂಡು ಎಲ್ಲಿ ಎಂದು ಹುಡುಕಾಡುತ್ತಿರುವುದನ್ನು ಗಮನಿಸಿದ ಪ್ಯಾಟ್ ಕಮಿನ್ಸ್ ಓಡಿ ಬಂದು ಬಾಲ್ ಅನ್ನು ಎತ್ತಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.