Friday, March 31, 2023

Latest Posts

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು: ದೆಹಲಿಯಲ್ಲಿ ಪ್ರಧಾನಿ ಮೋದಿಯಿಂದ ಕನ್ನಡದ ಗುಣಗಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎನ್ನುವ ಮೂಲಕ ಕನ್ನಡದಲ್ಲೇ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು.

ದೆಹಲಿಯ ತಾಲ್ಕಾಟೋರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಬಾರಿಸು ಕನ್ನಡ ಡಿಂಡಿಮ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ನಮ್ಮ ದೇಶವು 75 ವರ್ಷದ ಅಮೃತ ಮಹೊತ್ಸವದಲ್ಲಿದೆ. ಈ ಸಂಘದ ಭವಿಷ್ಯಕಂಡ ಎಲ್ಲಾ ಮಹನಿಯರಿಗೂ ನನ್ನ ನಮನ. 75 ವರ್ಷ ಸಂಘ ನಡೆಸೋದು ಅಷ್ಟು ಸುಲಭವಲ್ಲ. ಎಲ್ಲಾ ಸದಸ್ಯರಿಗೂ ನಾನು ಅಭಿನಂದಿಸುತ್ತೆನೆ. ಕರ್ನಾಟಕ ಹೊರತು ಪಡಿಸಿ ಭಾರತವನ್ನ ಊಹಿಸಲು ಸಾದ್ಯವಿಲ್ಲ. ಹುನುಮ ನಿರದೆ ರಾಮನೂ ಇಲ್ಲ- ರಾಮಾಯಣನೂ ಇಲ್ಲ. ಪುರಾಣ ಕಾಲದಿಂದಲೂ ಕರ್ನಾಟಕದ ಮಹತ್ವವಿದೆ. ಕರ್ನಾಟಕದಲ್ಲಿ ಸಮಾನತೆ ಸಾರಲು ಬಸವಣ್ಣ, ಡೊಹರ ಕಕ್ಕಯ್ಯ ಎದ್ದು ಬಂದರು ಎಂದು ಹೇಳಿದರು.

ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಕೊಡುಗೆ ಅಪಾರವಾಗಿದ್ದು, ದೇಶ ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡಿಗರಿಗೆ ನಾನು ನಮಿಸುತ್ತೇನೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರಭಾವ ದೇಶ-ವಿದೇಶಗಳಿಗೆ ಹರಡಿದೆ. ಕರ್ನಾಟಕದ ಏಳಿಗೆ ಎಂದರೆ ದೇಶದ ಏಳಿಗೆಯಾಗಿದೆ. ಕರ್ನಾಟಕದ ಅಭಿವೃದ್ಧಿ ನಮ್ಮ ಸರ್ಕಾರದ ಪರಮೋಚ್ಛ ಉದ್ದೇಶವಾಗಿದೆ ಎಂದರು.

ಕರ್ನಾಟಕ ಸಂಪ್ರದಾಯಗಳ ನಾಡು ಹಾಗೂ ತಂತ್ರಜ್ಞಾನದ ನಾಡು. ಇಲ್ಲಿ ಐತಿಹಾಸಿಕ ಸಂಸ್ಕೃತಿಯ ಜೊತೆಗೆ ಆಧುನಿಕ ಕೃತಕ ಬುದ್ಧಿಮತ್ತೆಯೂ ಇದೆ. ಇದು ನಮ್ಮ ಸಂಸ್ಕೃತಿ ಹಾಗೂ ಆಧುನಿಕತೆಯನ್ನು ಸಮಾನವಾಗಿ ಮೈಗೂಡಿಸಿಕೊಂಡ ರಾಜ್ಯವಾಗಿದೆ ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.

ಕರ್ನಾಟಕದ ಸಿರಿಧಾನ್ಯಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಿದ್ದರು. ಸಿರಿಧಾನ್ಯದ ಪ್ರಮುಖ ಕೇಂದ್ರ ಕರ್ನಾಟಕ. ರಾಗಿ ಕರ್ನಾಟಕ ಸಂಸ್ಕೃತಿಯ ಭಾಗ ಎಂದು ಹೇಳಿದ್ದಾರೆ.

ಮೊದಲು ಕರ್ನಾಟಕದಲ್ಲಿ ಸರ್ಕಾರ ಮಾಡಿದವರು ಅಲ್ಲಿಂದ ಹಣ ಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಇಲ್ಲಿನ ಹಣ ಜನರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಮೂರು ವರ್ಷದಲ್ಲಿ 30 ಸಾವಿರ ಕೋಟಿ ಬಿಜೆಪಿ ನೀಡಿದೆ. ಕಾಂಗ್ರೆಸ್ 10 ವರ್ಷದ ಅವಧಿಯಲ್ಲಿ ಕೇವಲ 11 ಸಾವಿರ ಕೋಟಿ ನೀಡಿತ್ತು. ಪ್ರತಿ ವರ್ಷ ನಮ್ಮ ಸರ್ಕಾರ ರಸ್ತೆಗೆ 5 ಸಾವಿರ ಕೋಟಿ ನೀಡುತ್ತಿದೆ. ಭದ್ರಾ ಮೇಲ್ದಂಡೆ ಮೂಲಕ ಮಧ್ಯ ಕರ್ನಾಟಕದ ಅಭಿವೃದ್ಧಿ ಮಾಡುತ್ತಿದೆ. ಇದರಿಂದ ಕರ್ನಾಟಕದ ವಿಕಾಸ ಬದಲಾಗಲಿದೆ. ಮುಂದಿನ 25 ವರ್ಷ ಮತ್ತಷ್ಟು ಮಹತ್ವದ ಕೆಲಸಗಳನ್ನು ಮಾಡಬಹುದು. ಕಲಿಕೆ ಮತ್ತು ಕಲೆ ಎರಡನ್ನು ಅಭಿವೃದ್ಧಿ ಮಾಡಬೇಕು. ಕನ್ನಡ ಭಾಷೆ ಓದುವವರಿಂದ ರಿಡೀಂಗ್ ಹ್ಯಾಬಿಟ್ ಚೆನ್ನಾಗಿರುತ್ತದೆ. ಈ ಕೌಶಲ್ಯ ಬೇರೆ ಭಾಷೆಗಳಲ್ಲಿ ಇಲ್ಲ ಎಂದು ಹೇಳಿದರು.

ಲಂಡನ್‌ನಲ್ಲಿ ಭಗವಾನ್ ಬಸವೇಶ್ವರರ ಪ್ರತಿಮೆಯನ್ನು ಅನಾವರಣಗೊಳಿಸುವ ಸೌಭಾಗ್ಯನನಗೆ ದೊರೆತಿದೆ. ಬಸವೇಶ್ವರರ ಬೋಧನೆಗಳು ವಿವಿಧ ಭಾಷೆಗಳಲ್ಲಿ ಕೂಡ ಲಭ್ಯವಿದೆ. ಇದೆಲ್ಲವೂ ಕರ್ನಾಟಕದ ಸಂಪ್ರದಾಯ ಮತ್ತು ಮೌಲ್ಯಗಳು ಮಾತ್ರವಲ್ಲ, ಅವುಗಳ ಪ್ರಭಾವವೂ ಅಮರವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ನ್ಯಾಷನಲ್ ವಾರ್ ಮೆಮೊರಿಯಲ್, ಕರ್ತವ್ಯ ಪಥ್, ಪ್ರಧಾನಮಂತ್ರಿ ಮ್ಯೂಸಿಯಂ ಎಲ್ಲವೂ ನೋಡಿಕೊಂಡು ಹೋಗಬೇಕು. ನೋಡಿದ ಮೇಲೆ ನೀವೂ ಗರ್ವ ಪಡೆಯಲಿದ್ದಿರಿ. ಈ ಕೆಲಸ ಮೊದಲೆ ಆಗಬೇಕಿತ್ತು ಎನ್ನಲಿದ್ದಿರಿ. 2047ಕ್ಕೆ ಭಾರತ ವಿಕಸಿತ ರಾಷ್ಟ್ರ ಆಗಲಿದೆ. ಆಗ ಕರ್ನಾಟಕ ಸಂಘ ಕೂಡ ತನ್ನ 100ನೇ ವರ್ಷಾಚರಣೆ ಮಾಡಲಿದೆ. ಹೀಗಾಗಿ ನಿಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!