ಅಣ್ಣ-ತಮ್ಮ, ಅಕ್ಕ-ತಂಗಿ ಈ ಗ್ಯಾಂಗ್ ನಮ್ ಲೈಫ್‌ನಲ್ಲಿ ಇದ್ರೆ ಬದುಕೋದಕ್ಕೆ ಒಂಥರಾ ಕಿಕ್, ಮನಸಿಗೆ ಫುಲ್ ಖುಷಿ! ಬ್ಲಡ್ ರೀಲೇಶನ್ ಅನ್ನೋದಕ್ಕಿಂತ ಹೆಚ್ಚಾಗಿ, ಇವ್ರು ನಮ್ ಲೈಫ್‌ನ ಅಫಿಷಿಯಲ್ ಕಾಮಿಡಿ ಪಾರ್ಟ್‌ನರ್ಸ್, ಸೀಕ್ರೆಟ್ ಕೀಪರ್ಸ್ ಮತ್ತು ಫ್ರೀ ಹ್ಯಾಂಗ್‌ಔಟ್ ಬಡ್ಡೀಸ್.

ಸಣ್ಣ ವಯಸ್ಸಲ್ಲಿ ಅವನ್ ತಟ್ಟೇಲಿ ಇರೋ ದೋಸೆ ನಂಗಿಂತ ದೊಡ್ಡದಾಗಿದೆ ಅಂತ ರಾದ್ಧಾಂತ ಮಾಡೋದ್ರಿಂದ ಹಿಡಿದು, ಟಿವಿ ರಿಮೋಟ್‌ಗಾಗಿ ಕುಸ್ತಿ ಪಂದ್ಯ ಆಡೋವರ್ಗೂ ಎಲ್ಲಾ ಕಿತಾಪತಿಗಳೂ ಇವ್ರ ಜೊತೆನೇ. ಅಣ್ಣ ಅಂದ್ರೆ ಅಪ್ಪನ ಥರ ಓವರ್ ಬಿಲ್ಡಪ್ ಕೊಡೋ ಗಾರ್ಡಿಯನ್, ಆದ್ರೆ ಪಾಕೆಟ್ ಮನಿ ಬೇಕು ಅಂದಾಗ ತಕ್ಷಣ ಸರ್ವೆಂಟ್ ಆಗಿಬಿಡ್ತಾನೆ. ತಮ್ಮ ಅಂದ್ರೆ ಇಡೀ ಮನೇಗೆ ಉಚಿತವಾಗಿ ಸಿಗೋ ಮನೆಗೆಲಸದ ಆಳು. ‘ಲೇಯ್, ಒಂಚೂರು ಅಂಗಡಿಗೆ ಹೋಗಿ ಹಾಲು ತಾರೋ’ ಅಂದ್ರೆ ಸಾಕು, ಫ್ರೀಯಾಗಿ ಕೆಲಸ ಮುಗೀತು.

ಇನ್ನು ಇವರ ಬ್ಲಾಕ್‌ಮೇಲ್ ತಂತ್ರಗಳಂತೂ ಅಂತಿಂತದ್ದಲ್ಲ. ತಮ್ಮ ಏನಾದ್ರೂ ಲವರ್ ಜೊತೆ ಫೋನಲ್ಲಿ ಮಾತನಾಡೋದು ಅಕ್ಕನ ಕಣ್ಣಿಗೆ ಬಿತ್ತು ಅಂದ್ಕೋ, ಮುಗೀತು ಕಥೆ. ಪಾಕೆಟ್ ಮನಿ ಅರ್ಧ ನನಗೆ ಕೊಡ್ತಿಯಾ ಅಥವಾ ಅಪ್ಪಂಗೆ ಹೇಳ್ಲಾ? ಅನ್ನೋ ಒಂದೇ ಒಂದು ಡೈಲಾಗ್‌ಗೆ ತಮ್ಮ ಸರೆಂಡರ್ ಆಗಿಬಿಡ್ತಾನೆ. ಅದೇ ರೀತಿ ಅಕ್ಕ ಯಾರ ಜೊತೆನಾದ್ರೂ ಹೊರಗಡೆ ಹೋದಾಗ ತಮ್ಮ ನೋಡಿಬಿಟ್ರೆ, ಇಡೀ ವಾರ ಅವಳ ಕೈಯಲ್ಲಿ ತಿಂಡಿ ಮಾಡಿಸಿಕೊಂಡು ತಿನ್ನೋ ಪವರ್ ತಮ್ಮನ ಕೈಗೆ ಸಿಕ್ಕಿಬಿಡುತ್ತೆ.

ಆದ್ರೆ ಎಷ್ಟೇ ಜಗಳ ಆಡ್ಲಿ, ಕಚ್ಚಾಡ್ಲಿ.. ಬೇರೆ ಯಾರಾದ್ರೂ ಬಂದು ನಮ್ ಅಣ್ಣಂಗೆ ಅಥವಾ ತಂಗಿಗೆ ಏನಾದ್ರೂ ಅಂದ್ರೆ ಮುಗೀತು, ಅವತ್ತೇ ಅವರ ನಿಜವಾದ ಅವತಾರ ಹೊರಬರೋದು. ನನ್ನ ತಂಗಿ ತಂಟೆಗೆ ಬರ್ತಿಯಾ ಮಗನೇ? ಅಂತ ಇಡೀ ಏರಿಯಾನೇ ತಲೆಯ ಮೇಲೆ ಎತ್ಕೊಳ್ತಾರೆ.

ವಯಸ್ಸಾಗ್ತಾ ಆಗ್ತಾ ಎಲ್ಲರೂ ಬೇರೆ ಬೇರೆ ಕಡೆ ಸೆಟ್ಲ್ ಆಗಬಹುದು, ಆದ್ರೆ ಆ ಬಾಲ್ಯದ ಬಾಂಡಿಂಗ್ ಇದೆಯಲ್ಲ, ಅದು ಲೈಫ್ ಲಾಂಗ್ ಸ್ವೀಟ್ ಮೆಮೊರಿ. ಇವರ್ಯಾರೂ ಇಲ್ಲದೆ ಲೈಫ್ ಕಲ್ಪನೆ ಮಾಡ್ಕೊಳ್ಳೋಕೂ ಆಗಲ್ಲ, ನಿಜ ಹೇಳ್ಬೇಕಾದ್ರೆ, ಎಷ್ಟೇ ಫ್ರೆಂಡ್ಸ್ ಇರಲಿ, ಲವರ್ ಇರಲಿ… ರಾತ್ರಿ ಲೇಟಾಗಿ ಮನೆಗೆ ಬಂದಾಗ ಬಾಗಿಲು ತೆಗೆಯೋಕೆ ಒಬ್ಬ ಅಣ್ಣ ಅಥವಾ ತಂಗಿ ಇರಬೇಕು. ನಮ್ ಕಷ್ಟ-ಸುಖ ಹಂಚಿಕೊಳ್ಳೋಕೆ ಈ ಒಡಹುಟ್ಟಿದವ್ರು ಇದ್ರೆ ಲೈಫ್‌ನಲ್ಲಿ ಏನೋ ಒಂಥರಾ ಖುಷಿ, ಹಂಗೆ ಒಂಥರಾ ಎಂಟರ್‌ಟೇನ್‌ಮೆಂಟ್.

ರಾಖಿ ಕಟ್ಟಿಸ್ಕೊಂಡ್ರೆ ಸಾಕ, ಗಿಫ್ಟ್ ಏನ್ ಕೊಡ್ತೀರಾ?
ಏನೂ ಐಡಿಯಾ ಸಿಗ್ತಿಲ್ವಾ? ಒಂದಿಷ್ಟು ದುಡ್ಡನ್ನ ಕವರ್‌ಗೆ ಹಾಕಿ ಕೈಗಿಟ್ಟುಬಿಡಿ
ಶಾಪಿಂಗ್ ವೋಚರ್ ಕೊಟ್ಟು ನೋಡಿ. ‘ನಮ್ಮಣ್ಣ ಪ್ರಪಂಚದಲ್ಲೇ ಬೆಸ್ಟ್’ ಅಂತ ಹೇಳ್ತಾರೆ
ಒಳ್ಳೆ ಬ್ಲೂಟೂತ್ ಇಯರ್‌ಫೋನ್ಸ್ ಕೊಟ್ಟುಬಿಡಿ, ಮನೆಯಲ್ಲಿ ನಿಮಗೂ ಶಾಂತಿ, ಅವಳಿಗೂ ಖುಷಿ!
ಯಾವುದಾದರೂ ಒಳ್ಳೆ ಬ್ರಾಂಡೆಡ್ ಸ್ಕಿನ್‌ಕೇರ್ ಕಾಂಬೋ ಪ್ಯಾಕ್ ತಂದು ಕೊಟ್ರೆ ಬೆಸ್ಟ್
ಬಜೆಟ್ ಸ್ವಲ್ಪ ಕಮ್ಮಿ ಇದ್ಯಾ? ಒಂದು ಡೈರಿ ಮಿಲ್ಕ್ ಸಿಲ್ಕ್ ಅಥವಾ ಫೆರೆರೊ ರೋಚರ್ ಬಾಕ್ಸ್ ಕೊಟ್ಟುಬಿಡಿ.
ಹಾಗಿದ್ರೆ ಇನ್ಯಾಕೆ ತಡ.. ಇವತ್ತು ನಿಮ್ಮ ಒಡಹುಟ್ಟಿದವರಿಗೆ ರಾಖಿ ಕಟ್ಟಿ, ಇವತ್ತು ಒಂದಿನ ಆದ್ರೂ ಏನು ಕಿತಾಪತಿ ಮಾಡ್ಕೊಳ್ದೆ ಫುಲ್ ಹ್ಯಾಪಿ ಆಗಿ ಇರಿ!!



