ರಾತ್ರಿ ನಿದ್ರೆ ಮಾಡುವಾಗ ದಿಂಬು ಬಳಸಬೇಕು ಅಥವಾ ಬೇಡವೇ ಎಂಬ ಪ್ರಶ್ನೆ ಬಹಳ ಮಂದಿ ಕೇಳೋದು ಸಾಮಾನ್ಯ. ಕೆಲವರಿಗೆ ದಿಂಬಿಲ್ಲದೆ ಮಲಗಿದ್ರೆ ಸರಿಯಾಗಿ ನಿದ್ದೆ ಬರೋದಿಲ್ಲ ಅಂತಾರೆ, ಮತ್ತೆ ಕೆಲವರಿಗೆ ದಿಂಬು ಇಟ್ಟರೆ ಕುತ್ತಿಗೆ ನೋವು ಕಾಣಿಸುತ್ತೆ ಅಂತಾರೆ. ನಿಜವಾಗಿ ನೋಡಿದರೆ, ಮಲಗುವ ರೀತಿಯೇ ಆರೋಗ್ಯದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ.
ಕುತ್ತಿಗೆಗೆ ಸರಿಯಾದ ಬೆಂಬಲ
ದಿಂಬು ಬಳಕೆ ಮಾಡುವುದರಿಂದ ಕುತ್ತಿಗೆ ಮತ್ತು ತಲೆಗೆ ಸರಿಯಾದ ಬೆಂಬಲ ಸಿಗುತ್ತದೆ. ವಿಶೇಷವಾಗಿ ಬೆನ್ನ ಮೇಲೆ ಮಲಗುವವರಿಗೆ ಮೃದುವಾದ ದಿಂಬು ಕುತ್ತಿಗೆಯ ಮೇಲೆ ಒತ್ತಡ ಕಡಿಮೆ ಮಾಡುತ್ತದೆ.
ತಪ್ಪಾದ ದಿಂಬು ಸಮಸ್ಯೆ ಹೆಚ್ಚಿಸಬಹುದು
ತುಂಬಾ ಎತ್ತರದ ಅಥವಾ ಗಟ್ಟಿ ದಿಂಬು ಬಳಸಿದರೆ ಕುತ್ತಿಗೆ ಮತ್ತು ಭುಜಗಳಲ್ಲಿ ನೋವು ಉಂಟಾಗಬಹುದು. ಅದರಿಂದ ಸರಿಯಾದ ಗಾತ್ರದ ದಿಂಬು ಆಯ್ಕೆ ಮಾಡುವುದು ಮುಖ್ಯ.
ಇದನ್ನೂ ಓದಿ:
ದಿಂಬಿಲ್ಲದೆ ಮಲಗುವುದರ ಲಾಭ
ಕೆಲವರು ಹೊಟ್ಟೆಯ ಮೇಲೆ ಮಲಗುವವರು ದಿಂಬಿಲ್ಲದೆ ಮಲಗಿದರೆ ಕುತ್ತಿಗೆಯ ಮೇಲೆ ಒತ್ತಡ ಕಡಿಮೆಯಾಗಬಹುದು ಎಂದು ತಜ್ಞರು ಹೇಳುತ್ತಾರೆ.
ನಿದ್ರೆ ಶೈಲಿಗೆ ತಕ್ಕ ದಿಂಬು ಆಯ್ಕೆ
ಪ್ರತಿ ವ್ಯಕ್ತಿಯ ಮಲಗುವ ಶೈಲಿ ಬೇರೆಬೇರೆ. ಆದ್ದರಿಂದ ದಿಂಬು ಬಳಸಬೇಕಾ ಬೇಡವಾ ಎನ್ನುವುದಕ್ಕಿಂತ, ನಿಮ್ಮ ದೇಹಕ್ಕೆ ಸೂಕ್ತವಾದ ದಿಂಬನ್ನು ಆಯ್ಕೆ ಮಾಡುವುದು ಉತ್ತಮ. ಸರಿಯಾದ ನಿದ್ರೆ ಉತ್ತಮ ಆರೋಗ್ಯಕ್ಕೆ ಅತ್ಯಂತ ಮುಖ್ಯ.



