July 4, 2026
Saturday, July 4, 2026
spot_img

ಘಟಪ್ರಭಾ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಶಾಲಾ ಬಾಲಕರು ಜಲಸಮಾಧಿ

ಹೊಸದಿಗಂತ ಬೆಳಗಾವಿ:

ಗೆಳೆಯರೊಂದಿಗೆ ಆಟವಾಡುತ್ತಾ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾದ ಕರುಣಾಜನಕ ಘಟನೆ ಸೋಮವಾರ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಗುಡಗನಟ್ಟಿ ಗ್ರಾಮದಲ್ಲಿ ಜರುಗಿದೆ.

ಹಳೆ ಗುಡಗನಟ್ಟಿ ಗ್ರಾಮದ ಕೃಷ್ಣ ವಿಠ್ಠಲ್ ಖಾನಾಪುರಿ (14) ಮತ್ತು ಪ್ರಜ್ವಲ್ ಗೋಕಾರ್ (13) ಮೃತಪಟ್ಟ ದುರ್ದೈವಿಗಳು. ಐವರು ಸ್ನೇಹಿತರ ಗುಂಪು ಒಟ್ಟಾಗಿ ಹಿಡಕಲ್ ಜಲಾಶಯದ ಹಿನ್ನೀರು ಬಳಿ ಈಜಲು ತೆರಳಿದ್ದರು. ನೀರಿನ ಆಳದ ಅರಿವಿಲ್ಲದೆ ನದಿಗೆ ಇಳಿದಾಗ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡು ಉಳಿದ ಸ್ನೇಹಿತರು ಗಾಬರಿಗೊಂಡಿದ್ದಾರೆ.

ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಯಮಕನಮರಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಎನ್.ಡಿ.ಆರ್.ಎಫ್ ತಂಡದ ನೆರವಿನೊಂದಿಗೆ ಕಾರ್ಯಾಚರಣೆ ಮುಂದುವರಿದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !