April 6, 2026
Monday, April 6, 2026
spot_img

VIROSH | ರಶ್ಮಿಕಾ-ವಿಜಯ್‌ ಮದುವೆಗೆ ಕನ್ನಡದ ಯಾವ ಸೆಲೆಬ್ರಿಟಿಗಳಿಗೆ ಆಹ್ವಾನ ಇದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಉದಯಪುರದ ರೆಸಾರ್ಟ್‌ನಲ್ಲಿ ನಡೆಯುತ್ತಿದೆ. ಮದುವೆಗೆ ಬರೀ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಹೈದರಾಬಾದ್‌ನಲ್ಲಿ ನಡೆಯುವ ರಿಸೆಪ್ಷನ್‌ಗೆ ಕನ್ನಡ ಸಿನಿ ಸ್ಟಾರ್‌ಗಳಿಗೆ ಆಹ್ವಾನ ನೀಡಲಾಗಿದೆ. ನಟಿ ಆಶಿಕಾ ರಂಗನಾಥ್‌ ಹಾಗೂ ರಶ್ಮಿಕಾ ಉತ್ತಮ ಸ್ನೇಹಿತರಾಗಿದ್ದು, ಆಶಿಕಾ ಈಗಾಗಲೇ ಉದಯಪುರ ತಲುಪಿದ್ದಾರೆ.

ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ರಶ್ಮಿಕಾರನ್ನು ಲಾಂಚ್‌ ಮಾಡಿದ ರಿಷಭ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿಗೆ ರಶ್ಮಿಕಾ ಆಹ್ವಾನ ನೀಡಿಲ್ಲ. ಇಂಡಸ್ಟ್ರಿಯ ದಿಗ್ಗಜರಿಗೆ ಇನ್ವೈಟ್‌ ಕಳಿಸಿದ್ದು, ರಶ್ಮಿಕಾ ಸಂದೇಶದಲ್ಲಿಯೂ ಕರೆದಿದ್ದಾರೆ.

ಯಾರಿಗೆಲ್ಲ ಆಹ್ವಾನ
ನಟ ಕಿಚ್ಚ ಸುದೀಪ, ಶಿವರಾಜ್‌ಕುಮಾರ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಧ್ರುವ ಸರ್ಜಾ, ಗಣೇಶ್‌ಗೆ ಆಹ್ವಾನ ಸಿಕ್ಕಿದೆ. ಇನ್ನು ನಿರ್ದೇಶಕರಾದ ಎ ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಅವರನ್ನು ಮದುವೆಗೆ ಕರೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !