ಫುಟ್ಬಾಲ್ ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಶೆಡ್ ಬಿದ್ದು ಆರು ಮಕ್ಕಳಿಗೆ ಗಂಭೀರ ಗಾಯ!

ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಥಾಣೆಯಲ್ಲಿ ಫುಟ್ಬಾಲ್ ಮೈದಾನದಲ್ಲಿ ಶೆಡ್ ಬಿದ್ದು ಆರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಜೂನ್ 21 ರಂದು ರಾತ್ರಿ 11:42 ರ ಸುಮಾರಿಗೆ ಥಾಣೆಯ ಫುಟ್ಬಾಲ್ ಮೈದಾನದಲ್ಲಿ ಆಟವಾಡುತ್ತಿದ್ದ 17 ಮಕ್ಕಳಲ್ಲಿ ಆರು ಮಕ್ಕಳು ಮೈದಾನದಲ್ಲಿ ಶೆಡ್ ಬಿದ್ದು ಗಾಯಗೊಂಡಿದ್ದಾರೆ” ಎಂದು ಥಾಣೆ ಪುರಸಭೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ ತಿಳಿಸಿದೆ.

ಅಧಿಕಾರಿಗಳ ಪ್ರಕಾರ, ಗಾಯಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಥಾಣೆಯ ಬೆಥನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ನಂತರ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಆಸ್ಪತ್ರೆಗೆ ಆಗಮಿಸಿ ಗಾಯಗೊಂಡ ಮಕ್ಕಳನ್ನು ಭೇಟಿಯಾದರು. 17-18 ಮಕ್ಕಳು ಕ್ಯಾಂಪಸ್‌ನಲ್ಲಿ ಫುಟ್‌ಬಾಲ್ ಆಡಲು ಹೋಗಿದ್ದರು. ಗಾಳಿಯ ರಭಸಕ್ಕೆ ಮೇಲ್ಛಾವಣಿ ಮಕ್ಕಳ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿ ಏಳು ಮಕ್ಕಳು ಗಾಯಗೊಂಡಿದ್ದಾರೆ. ಈ ಪೈಕಿ 4 ಮಕ್ಕಳು ಆರೋಗ್ಯವಾಗಿದ್ದು, 3 ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಯನ್ನು ನಾನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!