VIRAL | ತಾಳಿ ಕಟ್ಟುವಾಗ ಗೊತ್ತಾಯ್ತು ಪಕ್ಕದಲ್ಲಿದ್ದವ ವರ ಅಲ್ಲ ಮತ್ಯಾರೋ ಅಂತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿಶ್ಚಿತಾರ್ಥದಿಂದ ಮದುವೆ ದಿನದವರೆಗೂ ಸಾವಿರಾರು ಬಾರಿ ಮಾತನಾಡಿ, ಹತ್ತಾರು ಬಾರಿ ವರನನ್ನು ಮೀಟ್‌ ಮಾಡೋದು ಸಾಮಾನ್ಯ. ಇಷ್ಟೆಲ್ಲಾ ಆದ ನಂತರ ಮದುವೆ ದಿನದಂದು ಮತ್ಯಾರೋ ವ್ಯಕ್ತಿ ತಾಳಿ ಕಟ್ಟೋಕೆ ಬಂದ್ರೆ? ಇದೆಲ್ಲಾ ಸಿನಿಮಾ ಕಥೆ ಅನ್ಬೇಡಿ. ಸಿನಿಮಾಗಳು ಇನ್ಸ್ಪೈರ್‌ ಆಗೋದೇ ನೈಜ ಘಟನೆಗಳಿಂದ..

ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರಾಯ್​ಬರೇಲಿಯ ವಧುವಿನ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಿಶ್ಚಯವಾಗಿತ್ತು. ಅದರಂತೆ ಮಂಗಳವಾರ ಹರ್ಯಾಣದ ಪಾನಿಪತ್​ನಿಂದ 900 ಕಿಲೋಮೀಟರ್​ ಪ್ರಯಾಣಿಸಿ, ವರನ ದಿಬ್ಬಣ ಆಗಮಿಸಿತ್ತು. ವರನನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದ ವಧುವಿನ ಕುಟುಂಬಕ್ಕೆ ಶಾಕ್​ ಕಾದಿತ್ತು. ತಮ್ಮ ಮನೆಯ ಮಗಳಿಗೆ ನಿಶ್ಚಯಿಸಿದ್ದ ವರನ ಬದಲಾಗಿ ಅಪರಿಚಿತ ವ್ಯಕ್ತಿ ಅಲ್ಲಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಮಧ್ಯವರ್ತಿ ಒಬ್ಬ ವ್ಯಕ್ತಿಯ ಫೋಟೋ ನೀಡಿ, ಇನ್ನೊಬ್ಬ ವ್ಯಕ್ತಿಯನ್ನು ಮಂಟಪಕ್ಕೆ ಕಳುಹಿಸಿರುವ ಕೆಟ್ಟ ತಂತ್ರ ಮಾಡಿರುವುದು ತಿಳಿದುಬಂದಿದೆ.

ವಧುವಿಗೆ ತಾಳಿ ಕಟ್ಟಬೇಕಾಗಿದ್ದ ವರ ನಾಪತ್ತೆಯಾಗಿದ್ದು, ಆ ವ್ಯಕ್ತಿಯ ಬದಲಾಗಿ ಅಪರಿಚಿತ ವ್ಯಕ್ತಿಯನ್ನು ಕಳುಹಿಸಲಾಗಿತ್ತು. ಈ ನಕಲಿ ವಿವಾಹದ ಹಿಂದಿನ ಮಧ್ಯವರ್ತಿ ಒಬ್ಬರು ಮಹಿಳೆಯಾಗಿದ್ದು, ಆಕೆಯ ಹೆಸರು ರಿಸು. ಆಕೆಯ ಮದುವೆ ಮಾಡಿಸುವ ಭರವಸೆ ನೀಡಿದ್ದರು, ಆದರೆ ಅದೀಗ ವಿಫಲವಾಗಿದೆ. ನಿಜವಾದ ವರನನ್ನು ನಕಲಿ ವ್ಯಕ್ತಿಯೊಂದಿಗೆ ಬದಲಾಯಿಸಲಾಗಿದೆ. ನಾವು ಆ ವ್ಯಕ್ತಿಯೊಂದಿಗೆ ನಮ್ಮ ಮನೆಯ ಮಗಳನ್ನು ಮದುವೆ ಮಾಡಿಕೊಡಲು ಸಿದ್ಧರಿರಲಿಲ್ಲ. ಆದ್ದರಿಂದ ನಾವು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ವಧುವಿನ ಸಂಬಂಧಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!