ಹೊಸದಿಗಂತ ಡಿಜಿಟಲ್ ಡೆಸ್ಕ್:
ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಹೋದರರಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ವಿಜಯಪುರದ ತಿಕೋಟಾದ ಬಾಬಾನಗರ ಗ್ರಾಮದಲ್ಲಿ ಈ ದುರಂತ ನಡೆದಿದೆ. ಅಣ್ಣ ರಾಜಕುಮಾರ ವಿಜಾಪುರ ಹಾಗೂ ತಮ್ಮ ಶ್ರೀಕಾಂತ್ ವಿಜಾಪುರ ಮೃತಪಟ್ಟವರು.
ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಂತಿ ಕಬ್ಬಿಣದ ಆಂಗಲ್ ಗೆ ತಗುಲಿ ವಿದ್ಯುತ್ ಶಾಕ್ ತಗುಲಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.