MEMORIES | ಬಿಳಿ ಯುನಿಫಾರ್ಮ್, ಕೇಸರಿ ಬಿಳಿ ಹಸಿರು ಟೇಪು, ಕಡೆಗೊಂಡು ಸಿಹಿತಿಂಡಿ!

ಮೇಘನಾ ಶೆಟ್ಟಿ, ಶಿವಮೊಗ್ಗ

ನೆನಪಿದ್ಯಾ ನಿಮ್ಮ ಶಾಲಾ ದಿನಗಳು? ಗಣರಾಜ್ಯೋತ್ಸವ ಬರೋಕೂ ತಿಂಗಳ ಮುನ್ನವೇ ಏನೋ ಒಂದು ಸಂಭ್ರಮ. ಶಾಲೆಗಳಲ್ಲಿ ಯಾರು ಸ್ಪೀಚ್ ಕೊಡ್ತೀರಾ? ಯಾರು ಹಾಡು ಹೇಳ್ತೀರಾ? ಯಾರಿಗೆ ಡ್ಯಾನ್ಸ್ ಬರತ್ತೆ ಅನ್ನೋ ಪ್ರಶ್ನೆ ಟೀಚರ್ ಕಡೆಯಿಂದ ಬಂದಾಗ ನಾವು ಕಾಣಿಸ್ಕೋಬಾರದು ಅಂತ ಕುತ್ತಿಗೆ ಬಗ್ಗಿಸಿದ್ದು!

ಟೀಚರ್ ಜೊತೆ ಐ ಕಾಂಟಾಕ್ಟ್ ಆಗಿ ಬಿಟ್ರೇ ನಾವೇ ಸ್ಪೀಚ್‌ಗೆ ಫಿಕ್ಸ್ ಎಂದು ಭಯಬಿದ್ದಿದ್ದು, ಎಲ್ಲೋ ಕೆಲವು ಫಸ್ಟ್ ಬೆಂಚ್ ಮಕ್ಕಳು ಮಾತ್ರ ‘ನಾನು ನಾನು ನಾನು’ ಅಂತ ಕೈ ಎತ್ತಿದ್ದು…

Republic Day Essay in English for Class 1, 2 & 3: 10 Lines, Short & Long Paragraphಸರಿ ಸೆಲೆಕ್ಷನ್ ಏನೋ ಆಗೋಯ್ತು, ಇನ್ನು ಸ್ಪೀಚ್ ತಯಾರಿ, ಹಾಡಿನ ಪ್ರಾಕ್ಟೀಸ್ ಎಂದು ಕ್ಲಾಸ್ ಬಿಟ್ಟು ಸ್ಪೋರ್ಟ್ಸ್ ರೂಮ್‌ನಲ್ಲಿ ಕಾಲ ಕಳೆದಿದ ನೆನಪು ಹಾಗೇ ಇದೆ. ಅಂತೂ ಬಹುದಿನಗಳ ಆಸೆಯ ಗಣರಾಜ್ಯೋತ್ಸವದ ದಿನ ಬಂದೇ ಬಿಡ್ತು.

ನಾಳೆ ಸೋಮವಾರ, ಆದ್ರೆ ಮಾರ್ನಿಂಗ್ ಕ್ಲಾಸ್ ಹೀಗೆ ಹೋಗಿ ಹಾಗೇ ಮನೆಗೆ ಬಂದುಬಿಡ್ಬೋದು ಅನ್ನೋ ಖುಷಿ. ಹಿಂದಿನ ದಿನವೇ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದು, ಪಕ್ಕದ ಮನೆಯಿಂದ ಒಂದೆರಡು ರೋಸ್ ಕದ್ದುಕೊಂಡು ಇಟ್ಟಿರುತ್ತಿದ್ದೆವು, ಇದನ್ನು ಮುಡಿಯೋಕಲ್ಲ, ಶಾಲೆಯಲ್ಲಿ ಗಾಂಧೀಜಿ ಫೋಟೊ ಇಟ್ಟಿರ‍್ತಾರಲ್ಲ, ಅಲ್ಲಿಗೆ ಕೊಡೋದಕ್ಕೆ.

Gourav Awasiya Uchcha Vidyalaya || Bokaroಕಲೆಯಾಗಿರುವ ಬಿಳಿ ಶೂಗೆ ಚಾಕ್‌ಪೀಸ್ ತಿಕ್ಕೊಂಡು, ಬಿಳಿ ಅಂಗಿ ಹಾಕ್ಕೊಂಡು, ಕೈಗೆ ಕೇಸರಿ ಬಿಳಿ ಹಸಿರು ಬ್ಯಾಂಡ್, ಗಟ್ಟಿಯಾಗಿ ಹೆಣೆದ ಜಡೆಗೆ ಬಣ್ಣದ ಟೇಪು, ಹಣೆ ಮೇಲೂ ಕೇಸರಿ ಬಿಳಿ ಹಸಿರು ಚುಕ್ಕಿ. ಕೈಯಲ್ಲೊಂದು ಫ್ಲಾಗ್ ಇಟ್ಕೊಂಡು ಅಪ್ಪನ ಸ್ಕೂಟರ್ ಏರಿದ್ದೆವು.

ಸಾಲಾಗಿ ಕೂರಿಸಿ ಶಿಕ್ಷಕರು ಭಾಷಣ ಆರಂಭಿಸಿದಾಗ ಎಲ್ಲ ಎನರ್ಜಿ ಒಂದೇ ಸಲ ಖಾಲಿ. ಮಣ್ಣಿನಲ್ಲಿ ಕಲ್ಲು ಹುಡುಕುತ್ತಾ, ಪುಟ್ಟ ಕಲ್ಲನ್ನು ಸ್ನೇಹಿತರಿಗೆ ಹೊಡೆದು ‘ನಾನಲ್ಲಪ್ಪ’ ಅನ್ನೋ ಎಕ್ಸ್‌ಪ್ರೆಶನ್ ಕೊಡುತ್ತಾ ಟೈಮ್ ಪಾಸ್ ಮಾಡಿದ್ದುಂಟು.

Chandigarh schools: Republic Day celebrations 2020 - Hindustan Timesಕಡೆಗೆ ಮೊದಲ ರೋನಿಂದ ಸ್ವೀಟ್ ಕೊಡ್ತಿದ್ದಾರೆ ಎಂದು ತಿಳಿದಂತೆಯೇ ಯಾವ ಸ್ವೀಟ್ ಎಂದು ಬಗ್ಗಿ ಬಗ್ಗಿ ನೋಡಿದ್ದು, ನಮ್ಮ ಕೈಗೆ ಕೊಟ್ಟ ಕ್ಷಣವೇ ಪುರುಸೊತ್ತಿಲ್ಲದಂತೆ ತಿಂದುಹಾಕಿದ್ದು!

10 ಗಂಟೆಗೆ ಶಾಲೆ ಮುಗಿಸಿ ನಿಧಾನವಾಗಿ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ಮನೆ ತಲುಪಿದ್ದು…

All colourful and vibrant: School children rehearse for Republic Day Parade 2023 | Pics - India Todayಇದೆಲ್ಲಾ ಎಂದೂ ಮಾಸದ ಸುಂದರ ನೆನಪುಗಳು, ಇನ್ನೂ ಹತ್ತಿಪ್ಪತ್ತು ವರ್ಷ ಬಿಟ್ಟರೂ ಈ ನೆನಪು ಹೀಗೆ ಇರುತ್ತದೆ. ನಿಮ್ಮ ಮಕ್ಕಳಿಗೂ ಅವರ ಮಕ್ಕಳಿಗೂ ನಮ್ಮ ಕಾಲದಲ್ಲಿ ಹೀಗೆ ಆಚರಣೆ ಮಾಡ್ತಿದ್ವಿ ಎಂದು ಹೇಳಿ. ಈಗಲೂ ಕಾಲ ಮಿಂಚಿಲ್ಲ. ಸಾಧ್ಯವಾಗುವುದಾದರೆ ಸುತ್ತಮುತ್ತ ಇರುವ ಯಾವುದೇ ಶಾಲೆಗೆ ತೆರಳಿ ನಿಮ್ಮ ಬಾಲ್ಯವನ್ನು ಮತ್ತೆ ಜೀವಿಸಿ. ಈ ಸಣ್ಣ ಖುಷಿಗಳೇ ಅಲ್ವಾ ನಿಮ್ಮನ್ನು ಜೀವಂತವಾಗಿ ಇರಿಸೋದು..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!