ಗ್ಯಾರಂಟಿ ಕೇಳಿದ್ದು ಯಾರು?,.ದೇವರಾಜು ಅರಸು ಅಕ್ಕಿ ಕೊಡಲಿಲ್ಲ, ಭೂಮಿಕೊಟ್ಟರು: ಎಚ್. ವಿಶ್ವನಾಥ್

ಹೊಸದಿಗಂತ ವರದಿ, ವಿಜಯಪುರ:

ಗ್ಯಾರಂಟಿ ಕೇಳಿದ್ದು, ಯಾರು ನಿಮಗೆ, ಡಿ.ದೇವರಾಜು ಅರಸು ಅಕ್ಕಿ ಕೊಡಲಿಲ್ಲ, ಅಕ್ಕಿ ಬೆಳೆಯುವ ಭೂಮಿಕೊಟ್ಟರು. ಸಿದ್ದರಾಮಯ್ಯನವರ ಈ ಗ್ಯಾರಂಟಿ ಯೋಜನೆ ನಿರ್ಣಯ ಒಳ್ಳೆಯದಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾತ್ರಿ 11.30 ರ ವರೆಗೂ ಸಿದ್ದರಾಮಯ್ಯ ನವರಿಗೆ ಕಾದು ನಾನು ಗ್ಯಾರಂಟಿ ಯೋಜನೆಯಿಂದ ಆಗುವ ಸಮಸ್ಯೆಗಳನ್ನು ವಿವರಿಸಿದ್ದೆ. ಒಂದು ಸಂಸಾರಕ್ಕೆ ಏನು ಸಮಸ್ಯೆ ಇದೆ ಅದನ್ನು ಮೊದಲು ಬಗೆಹರಿಸಿ, ಗ್ಯಾರಂಟಿ ಬದಲು ಉಚಿತ ಸಂಪೂರ್ಣ ಆರೋಗ್ಯ ಚಿಕಿತ್ಸೆ ಕೊಡಬಹುದಿತ್ತು, ಇಂದು ಆಸ್ಪತ್ರೆಗೆ ಹೋದರೆ ಲಕ್ಷಾಂತರ ರೂ. ಬಿಲ್ ಆಗುತ್ತದೆ, ಗ್ಯಾರಂಟಿ ಬದಲು ಇದನ್ನು ತಪ್ಪಿಸಬೇಕಿತ್ತು, ಆದರೆ ಸಿದ್ದರಾಮಯ್ಯ ನವರು ತಮಗೆ ತೋಚಿದ್ದನ್ನು ಮಾಡಿದ್ದಾರೆ, ಅದು ಜನರಿಗೆ ಬೇಕಾ ಬೇಡವಾ ಎಂಬುದು ತಿಳಿದುಕೊಳ್ಳಬೇಕಿತ್ತು. ಒಂದು ಬಿಯರ್ ಬಾಟಲು 130 ರೂ. ಇದ್ದದ್ದು 270 ಆಗಿದೆ. ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ 2000 ಕೊಟ್ಟರೆ ಏನಾಗುವುದು ಎಂದು ಪ್ರಶ್ನಿಸಿದರು.

ಕನ್ನಡ ರಾಜ್ಯೋತ್ಸವವನ್ನು ಸರ್ಕಾರ 50 ವರ್ಷದ ಸುವರ್ಣ ಮಹೋತ್ಸವ ಎಂದು ಕಾರ್ಯಕ್ರಮ ಮಾಡಲು ಹೊರಟಿರುವುದು ಸಂತೋಷ. ಕನ್ನಡ ವಿಚಾರವಾಗಿ ಬರೀ ಭಾಷಣ ಮಾಡಿಕೊಂಡು ಹೊರಟಿದ್ದಾಗಿದೆ. ಕನ್ನಡದ ಬಗೆಗಿನ ಸಾರ್ಥಕತೆ, ಅದರ ಬಗ್ಗೆ ಧೈರ್ಯವಾಗಿ ಹೇಳುವುದು ಆಗಲಿಲ್ಲ. ರಾಜ್ಯ ಸರ್ಕಾರ ಕನ್ನಡದ ಆಡಳಿತ ಭಾಷೆ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಿ ರಾಷ್ಟ್ರಪತಿಗಳಿಗೆ ಕಳಿಸಿದರು. ಆದರೆ ಅವರು ಸ್ಪಷ್ಟೀಕರಣ ಕೇಳಿದರು, ಈ ವಿಚಾರವಾಗಿ ಏನಾಯಿತಿ ಎಂಬುದು ಇನ್ನೂ ತಿಳಿಸಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಕನ್ನಡದ ಭಾಷೆ ಹಾಗೂ ಶಿಕ್ಷಣದ ಬಗ್ಗೆ ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಕನ್ನಡ ಪರ ಚಳವಳಿಗಾರರು, ಹೋರಾಟಗಾರ, ಸಲಹೆ ಪಡೆದುಕೊಳ್ಳಿ. ವಿಧಾನಸೌಧದ ಮುಂದೆ 27 ಕೋಟಿ ಖರ್ಚು ಮಾಡಿ ಕನ್ನಡಾಂಬೆಯ ಕಂಚಿನ ಪ್ರತಿಮೆ ಹಾಕುತ್ತಾರೆ. ಗಡಿನಾಡು ಭಾಗದಲ್ಲಿ ಕನ್ನಡ ಶಿಕ್ಷಕರೇ ಇಲ್ಲ. 10 ಸಾವಿರ ಕೊಟ್ಟು ಅತಿಥಿ ಶಿಕ್ಷಕರನ್ನು ತಗೆದುಕೊಳ್ಳುತ್ತಿದ್ದಾರೆ. ಗಡಿನಾಡು ಭಾಗದಲ್ಲಿ ಕನ್ನಡ ಸತ್ತು ಹೋಗುತ್ತಿದೆ ಎಂದು ಎಚ್ಚರಿಸಿದರು.

ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು. ಕನ್ನಡದ ವಿಚಾರವಾಗಿ ಸುಮ್ಮನೆ ಮಾತನಾಡುತ್ತಾರೆ. ರಾಜ್ಯೋತ್ಸವ ಬರೀ ಡಂಗುರ ಇರುತ್ತೆ, ಆದರೆ ಕೃತಿಯಲ್ಲಿ ಯಾವುದೂ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಚಿತ್ರಗಳಲ್ಲಿ ಸಹಿತ ಈಗ ಇಂಗ್ಲಿಷ್ ಹೆಸರುಗಳು (ಕೆಜಿಎಫ್) ರಾರಾಜಿಸುತ್ತಿದೆ, ಕನ್ನಡದ ಉಳಿವಿಗಾಗಿ ಮೊದಲು ಸರ್ಕಾರ ಪ್ರಯತ್ನ ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ಉಪ ಚುನಾವಣೆ ವಿಚಾರವಾಗಿ, ಉಪ ಚುನಾವಣೆ ಎಂದರೆ ಮಾಧ್ಯಮದವರು, ರಾಜಕಾರಣಿಗಳು ಅದಕ್ಕೆ ಬೇರೆ ಬೇರೆ ಬಣ್ಣ ಕೊಡುತ್ತಾರೆ. ಉಪ ಚುನಾವಣೆಯಲ್ಲಿ 135 ಆಗಲ್ಲ, 137 ಆಗಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!