ದಿಗಂತವರದಿ ಹುಬ್ಬಳ್ಳಿ:
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಕರೆದವರು ಯಾರು? ಅವರಿಗೆ ಯಾವುದೇ ನೀತಿ ಸಿದ್ಧಾಂತಗಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ರಾಷ್ಟ್ರಪತಿ, ಪ್ರಧಾನ ಮಂತ್ರಿ ಮಾಡುತ್ತೇವೆ ಅಂದರು ಬಿಜೆಪಿ ಸೆರಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಜೋಶಿ, ಸಿದ್ದರಾಮಯ್ಯ ಹಿಂದೆ ಜೆಡಿಎಸ್ ನಲ್ಲಿ ಇದ್ದಾಗ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರೀಯಾಂಕ ಗಾಂಧಿ ಬಾಯಿಗೆ ಬಂದ ಹಾಗೇ ಮಾತನಾಡಿದ್ದರು. ಸಿದ್ದರಾಮಯ್ಯ ಬೈದಿದ್ದು ನೋಡಿದರೆ ಸೋನಿಯಾ ಗಾಂಧಿ ಅವರ ಮುಖ ನೋಡಬಾರದು. ಆದರೆ ಈಗ ಸಿದ್ದರಾಮಯ್ಯ ರಾಹುಲ್ ಗಾಂಧಿ ಮುಂದೆ ಟೊಂಕ್ ಬಗ್ಗಿಸಿ ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದರು.
ಇಂತಹ ಪರಿಸ್ಥಿತಿ ಎದುರಿಸುವ ಸಿದ್ದರಾಮಯ್ಯ ಬೇರೆ ಅವರಿಗೆ ಏನು ಉಪದೇಶ ಹೇಳಲು ಸಾಧ್ಯ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಸಿಎಂ ಮಾಡದಿದ್ದರೆ ಕಾಂಗ್ರೆಸ್ ನಲ್ಲಿರುವ ಬಣಗಳ ಬಗ್ಗೆ ಗೊತ್ತಾಗುತ್ತಿತ್ತು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಮಧ್ಯೆ ಏನು ನಡೆದಿದೆ ಅಂತ ಇಡೀ ಜಗತ್ತಿಗೆ ಗೊತ್ತಿದೆ. ಬಿಜೆಪಿ ಅವರು ಯಾರು ಸಿದ್ದರಾಮಯ್ಯ ಅವರನ್ನು ಕರೆದಿಲ್ಲ. ಅವರ ಈಗ ಯಾಕೆ ಹೇಳಿಕೆ ನೀಡಿದ್ದಾರೆ ಎಂಬ ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪತನ ವಿಚಾರ ಬಗ್ಗೆ ಪ್ರತಿಕ್ರಿಸಿದ ಅವರು, ಬೊಮ್ಮಾಯಿ ಯಾವ ದೃಷ್ಟಿಯಲ್ಲಿ ಹೇಳಿದ್ದಾರೆ ಎಂಬುವುದು ಗೊತ್ತಿಲ್ಲ. ಆದರೆ ಕಾಂಗ್ರೆಸ್ ನಲ್ಲಿನ ಆಂತರಿಕ ಭಿನ್ನಮತದಿಂದ ತೊಂದರೆಯಾಗುವುದು ಖಚಿತ ಎಂದು ಹೇಳಿದರು.