ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಜುಮೋಯಿರ್ ಬಿನಂದಿನಿಯಲ್ಲಿ ಚಹಾ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂನ ಚಹಾ ಉದ್ಯಮ ಮತ್ತು ಚಹಾ ಮಾರಾಟಗಾರನಾಗಿ ತಮ್ಮ ಆರಂಭಿಕ ವರ್ಷಗಳ ದಿನಗಳನ್ನು ನೆನಪಿಸಿಕೊಂಡರು.
ಅಸ್ಸಾಂ ರಾಜ್ಯದ 200 ವರ್ಷಗಳಷ್ಟು ಹಳೆಯದಾದ ಚಹ ಉದ್ಯಮವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ ಚಹಾ ಮಾರಾಟಗಾರನಿಗಿಂತ ಟೀ ಪರಿಮಳ ಮತ್ತು ಬಣ್ಣವನ್ನು ಯಾರು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯ? ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.
ಅಸ್ಸಾಂನ ಚಹಾ ತೋಟ ಸಂಸ್ಕೃತಿಯೊಂದಿಗಿನ ತಮ್ಮ ಆಳವಾದ ಸಂಪರ್ಕವನ್ನು ವ್ಯಕ್ತಪಡಿಸಿದರು, ಈ ಅದ್ಭುತ ತಯಾರಿಕೆಯು ಚಹಾ ತೋಟಗಳ ಪರಿಮಳ ಮತ್ತು ಸೌಂದರ್ಯವನ್ನು ಹೊಂದಿದೆ. ಚಹಾದ ಪರಿಮಳ ಮತ್ತು ಬಣ್ಣವನ್ನು ಚಾಯ್ವಾಲಾಗಿಂತ ಚೆನ್ನಾಗಿ ಯಾರು ತಿಳಿಯಲು ಸಾಧ್ಯ? ಎಂದು ಹೇಳಿದರು. ನೀವು ಚಹಾ ತೋಟಗಳ ಸಂಸ್ಕೃತಿಯೊಂದಿಗೆ ವಿಶೇಷ ಸಂಬಂಧ ಹೊಂದಿರುವಂತೆ, ನನಗೂ ಸಹ ಚಹಾ ತೋಟಗಳೊಂದಿಗೆ ವಿಶೇಷ ಸಂಬಂಧವಿದೆ ಎಂದರು.
ಅಸ್ಸಾಮಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಐತಿಹಾಸಿಕ ನಿರ್ಧಾರವನ್ನು ಘೋಷಿಸುವ ಮೂಲಕ, ಅಸ್ಸಾಮಿಯ ಸಾಂಸ್ಕೃತಿಕ ಮತ್ತು ಭಾಷಾ ಗುರುತನ್ನು ಕಾಪಾಡುವ ತಮ್ಮ ಸರ್ಕಾರದ ಸಮರ್ಪಣೆಯನ್ನು ಪ್ರಧಾನಿ ಎತ್ತಿ ತೋರಿಸಿದರು.
ಇಂದು ಸಂಜೆ 8,500 ಯುವಕರಿಂದ ನೃತ್ಯ ಪ್ರದರ್ಶನ ನಡೆದಿದ್ದು, ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು 60 ವಿದೇಶಿ ರಾಯಭಾರಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಡೋಲು ಬಾರಿಸುವ ಮೂಲಕ ಐತಿಹಾಸಿಕ ಜುಮೋಯಿರ್ ಬಿನಂದಿನಿ ಜಾನಪದ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರೀಡಾಂಗಣದಲ್ಲಿ ಪ್ರಧಾನಮಂತ್ರಿ ಮೋದಿ ಚಹಾ ಬುಡಕಟ್ಟು ಸಮುದಾಯದ ಸುಮಾರು 9,000 ಕಲಾವಿದರ ದಾಖಲೆಯ ಜುಮೋಯಿರ್ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಉಡುಗೊರೆಗಳನ್ನು ಪ್ರದಾನ ಮಾಡಿದರು.