ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದ ಮೇಲೆ ಜೈಲು ವಾಸ ಅನುಭವಿಸಿ ಬಂದಿದ್ದಾರೆ.ಇದಾದ ಬಳಿಕ ಫೇಸ್ ಮಾಸ್ಕ್ ಹಾಕಿಕೊಂಡು ತಿರುಗಾಡುತ್ತಿದ್ದರು.
ಅದ್ರ ನಡುವೆ ಇಂದು ‘ನಾವಿಬ್ಬರೂ ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಕಾಲಾವಕಾಶ ನೀಡಿ ಅಂತ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ರಾಜ್ ಕುಂದ್ರಾ ಬರೆದುಕೊಂಡಿದ್ದು ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗ ಅದರ ಹಿಂದಿನ ಅಸಲಿ ಕಹಾನಿ ಏನು ಎಂಬುದನ್ನು ತೆರೆದಿಟ್ಟಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ಡಿವೋರ್ಸ್ ಪಡೆದಿಲ್ಲ. ಆ ರೀತಿಯ ಯಾವುದೇ ಆಲೋಚನೆ ಕೂಡ ಅವರಿಗೆ ಬಂದಿಲ್ಲ. ಸದ್ಯಕ್ಕಂತೂ ಅವರ ಸಂಸಾರ ಚೆನ್ನಾಗಿಯೇ ನಡೆಯುತ್ತಿದೆ. ಈಗ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟು ದಿನ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದ ರಾಜ್ ಕುಂದ್ರಾ ಅವರು ಮಾಸ್ಕ್ಗೆ ಗುಡ್ಬೈ ಹೇಳಲು ನಿರ್ಧರಿಸಿದ್ದಾರೆ.
‘ನಾವಿಬ್ಬರೂ ಬೇರೆ ಆಗಿದ್ದೇವೆ’ ಎಂದು ರಾಜ್ ಕುಂದ್ರ ಹೇಳಿರುವುದು ಮಾಸ್ಕ್ ಬಗ್ಗೆ. ಅದೀಗ ಸ್ಪಷ್ಟವಾಗಿದೆ. ಹೊಸ ಪೋಸ್ಟ್ ಮೂಲಕ ಅವರು ಆ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಮಾಸ್ಕ್ಗಳಿಗೆ ವಿದಾಯ. ಇದು ಬೇರೆ ಆಗುವ ಸಮಯ. ಕಳೆದ ಎರಡು ವರ್ಷಗಳಿಂದ ನನ್ನನ್ನು ಕಾಪಾಡಿದ್ದಕ್ಕಾಗಿ ಧನ್ಯವಾದಗಳು’ ಎಂದು ರಾಜ್ ಕುಂದ್ರಾ ಬರೆದುಕೊಂಡಿದ್ದಾರೆ. ಅಲ್ಲದೇ ಇಷ್ಟು ದಿನ ತಾವು ಧರಿಸಿದ ವಿವಿಧ ಬಗೆಯ ಮಾಸ್ಕ್ಗಳ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.