September 16, 2026
Wednesday, September 16, 2026
spot_img

ಯಶ್ ಯಶಸ್ಸಿನ ಹಿಂದಿರುವ ಆ ದಿವ್ಯ ಶಕ್ತಿ ಯಾರು? ನಯನತಾರಾ ಆಡಿದ ಮಾತು ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲ್ಟಿ-ಸ್ಟಾರರ್ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸಾಧನೆಯನ್ನು ಎಲ್ಲರೂ ಮುಕ್ತಕಂಠದಿಂದ ಹೊಗಳಿದರು. ಆದರೆ, ಸೌತ್‌ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರು ಮಾತ್ರ ಯಶ್ ಅವರ ಯಶಸ್ಸಿನ ಹಿಂದಿರುವ ನಿಜವಾದ ರೂವಾರಿ, ಅವರ ಪತ್ನಿ ರಾಧಿಕಾ ಪಂಡಿತ್ ಅವರ ಕೊಡುಗೆಯನ್ನು ಸ್ಮರಿಸಿ ಎಲ್ಲರ ಗಮನ ಸೆಳೆದರು.

ಯಶಸ್ಸಿನ ಹಿಂದೆ ಕುಟುಂಬದ ತ್ಯಾಗ

ವೇದಿಕೆ ಮೇಲೆ ಮಾತನಾಡಿದ ನಯನತಾರಾ, “ಯಾವುದೇ ಒಂದು ಸಿನಿಮಾ ಸೂಪರ್ ಹಿಟ್ ಆದಾಗ, ಪ್ರೇಕ್ಷಕರು ಮತ್ತು ಮಾಧ್ಯಮಗಳು ನಟ-ನಟಿಯರು, ನಿರ್ದೇಶಕರು ಹಾಗೂ ತಾಂತ್ರಿಕ ವರ್ಗದ ಶ್ರಮವನ್ನು ಮಾತ್ರ ಗುರುತಿಸುತ್ತವೆ. ಆದರೆ, ಆ ದೊಡ್ಡ ಯಶಸ್ಸಿನ ಹಿನ್ನೆಲೆಯಲ್ಲಿ ಮನೆ ಮಂದಿ ಮತ್ತು ಕುಟುಂಬದವರು ಮಾಡುವ ಅಪಾರ ತ್ಯಾಗ ಹಾಗೂ ಬೆಂಬಲದ ಬಗ್ಗೆ ಯಾರೂ ಹೆಚ್ಚಾಗಿ ಮಾತನಾಡುವುದಿಲ್ಲ” ಎಂದು ಹೇಳಿದರು.

ರಾಧಿಕಾ ಪಂಡಿತ್ ಅವರಿಗೆ ವಿಶೇಷ ಗೌರವ

ಯಶ್ ಪಕ್ಕದಲ್ಲೇ ಕುಳಿತಿದ್ದ ರಾಧಿಕಾ ಪಂಡಿತ್ ಅವರತ್ತ ಬೆಟ್ಟು ಮಾಡಿ ತೋರಿದ ನಯನತಾರಾ, “ರಾಧಿಕಾ ಅವರು ಯಶ್ ಪಾಲಿಗೆ ಅತಿದೊಡ್ಡ ಬಂಡೆಯಂತಹ ಶಕ್ತಿ. ಯಶ್ ಹೊಂದಿರುವ ದೊಡ್ಡ ಕನಸು ಮತ್ತು ದೂರದೃಷ್ಟಿಗೆ ಬೆನ್ನೆಲುಬಾಗಿ ನಿಂತು, ತಮ್ಮ ಸಮಯವನ್ನು ತ್ಯಾಗ ಮಾಡುತ್ತಿರುವ ರಾಧಿಕಾ ಅವರ ಬೆಂಬಲ ನಿಜಕ್ಕೂ ಪ್ರೇರಣಾದಾಯಕಾ. ಅವರ ಈ ಸಮರ್ಪಣಾ ಭಾವಕ್ಕೆ ನನ್ನ ಹೃದಯಪೂರ್ವಕ ಗೌರವ ಹಾಗೂ ಪ್ರೀತಿ ಇದೆ” ಎಂದರು.

ಪ್ರೀತಿಪೂರ್ವಕ ಕೃತಜ್ಞತೆ

ನಯನತಾರಾ ಅವರ ಈ ಪ್ರೀತಿ ಮತ್ತು ಗೌರವದ ಮಾತುಗಳನ್ನು ಕೇಳಿ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಮುಗುಳ್ನಗುತ್ತಾ ತಮ್ಮ ಧನ್ಯವಾದಗಳನ್ನು ಅರ್ಪಿಸಿದರು. ಸಿನಿರಂಗದ ನಟಿಯೊಬ್ಬರು ಮತ್ತೊಬ್ಬ ನಟಿಯ ತ್ಯಾಗ ಮತ್ತು ಬೆಂಬಲವನ್ನು ಮುಕ್ತವಾಗಿ ಹೊಗಳಿದ್ದು ಈ ಈವೆಂಟ್‌ನ ಅತ್ಯಂತ ಸುಂದರ ಕ್ಷಣವಾಗಿ ಮೂಡಿಬಂತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !