Saturday, December 9, 2023

Latest Posts

ರಾಮನಗರ ಅಭಿವೃದ್ಧಿ ಮಾಡಿದ್ದು ಯಾರು?: ಸಚಿವ ಅಶ್ವತ್ಥ ನಾರಾಯಣ್- ಸಂಸದ ಡಿ.ಕೆ. ಸುರೇಶ್ ವಾಗ್ವಾದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಸಚಿವ ಅಶ್ವತ್ಥ ನಾರಾಯಣ್ ಹಾಗೂ ಸಂಸದ ಡಿ.ಕೆ.ಸುರೇಶ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.

ಸಚಿವ ಅಶ್ವತ್ಥ ನಾರಾಯಣ ಕಾರ್ಯಕ್ರಮದಲ್ಲಿ ರಾಮನಗರದ ಅಭಿವೃದ್ಧಿ ಬಗ್ಗೆ ಭಾಷಣ ಮಾಡುತ್ತಿದ್ದರು. ಸಿಎಂ ಬೊಮ್ಮಾಯಿ ಕೂಡ ಅಲ್ಲೇ ಉಪಸ್ಥಿತರಿದ್ದರು. ಈ ವೇಳೆ ಸಚಿವರು ರಾಮನಗರದ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಈವರೆಗೂ ರಾಮನಗರದ ಅಭಿವೃದ್ಧಿ ಯಾರೂ ಮಾಡಿಲ್ಲ, ಏನೇ ಅಭಿವೃದ್ಧಿ ಆಗಿದ್ದರೂ ಅದನ್ನು ಮಾಡಿದ್ದು ಬಿಜೆಪಿ ಎಂದಿದ್ದಾರೆ.

ಅದಕ್ಕೆ ಕೋಪಗೊಂಡ ಸುರೇಶ್ ಸೀದ ವೇದಿಕೆಗೆ ತೆರಳಿದ್ದಾರೆ. ಈ ವೇಳೆ ಸುರೇಶ್ ಬೆಂಬಲಿಗರು ಡಿಕೆ,ಡಿಕೆ ಎಂದು ಕೂಗಿ, ಫೈಟ್ ವಾತಾವರಣ ಸೃಷ್ಟಿ ಮಾಡಿದ್ದಾರೆ. ಸಚಿವರ ವಿರುದ್ಧ ಮಾತನಾಡಿ, ಕೈ ಕೈ ಮಿಲಾಯಿಸುವ ಹಂತಕ್ಕೆ ಬರಲಾಗಿದೆ. ಈ ವೇಳೆ ಸಿಎಂ ಬೊಮ್ಮಾಯಿ ಮಧ್ಯಪ್ರವೇಶಿಸಿ ವಾತಾವರಣ ತಿಳಿ ಮಾಡಿದ್ದಾರೆ. ಇಲ್ಲಿ ಅಭಿವೃದ್ಧಿ ಬಗ್ಗೆ ಮಾತುಕತೆ ಆಗಲಿ, ಗಲಾಟೆ ಜಗಳಗಳು ಬೇಕಾಗಿಲ್ಲ ಎಂದು ಸಿಎಂ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!