April 12, 2026
Sunday, April 12, 2026
spot_img

ಯಾರು ದಿಲ್ಲಿಯ ಲಡ್ಡು ತಿನ್ನಬೇಡಿ: ಚುನಾವಣಾ ಪ್ರಚಾರದಲ್ಲಿ ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೇರಲು ಟಿಎಂಸಿ ಅಭ್ಯರ್ಥಿಗಳ ಪರ ಸಿಎಂ ಮಮತಾ ಬ್ಯಾನರ್ಜಿ ಭರ್ಜರಿ ಮತಬೇಟೆ ನಡೆಸಿದರು.

ಬಂಗಾಳದ ಕೈಗಾರಿಕಾ ಪ್ರದೇಶವಾದ ಅಸನ್ಸೋಲ್​ನಲ್ಲಿ ಪ್ರಚಾರ ನಡೆಸಿದ ಅವರು, ಯಾರು ದಿಲ್ಲಿಯ ಲಡ್ಡು ತಿನ್ನಬೇಡಿ, ಆ ಲಡ್ಡು ತಿಂದರೆ ಜೀವನದಲ್ಲಿ ಬೇಸರದ ಅನುಭವಾಗಲಿದೆ. ಮತ್ತೆ ನಾವೇ ಅಧಿಕಾರಕ್ಕೆ ಬಂದರೆ ನಾನೇ ನಾಲ್ಕು ಮಡಿಕೆಯ ನಾರು ಖಾದ್ಯವನ್ನು ನೇರವಾಗಿ ದೆಹಲಿಗೆ ಕಳುಹಿಸುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಮತಪತ್ರಗಳ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಕಿಡಿಕಾರಿದ ಅವರು, ಇಂತಹ ಕಾರ್ಯಗಳ ಮೂಲಕ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ಧೈರ್ಯವಿದ್ದರೆ, ಮುಂದೆ ಬಂದು ನಮ್ಮೊಂದಿಗೆ ನೇರವಾಗಿ ಹೋರಾಡಿ. ನಾನು ಇಲ್ಲಿಂದ ಬಿಜೆಪಿಯನ್ನು ಹೊರಹಾಕಿದ ನಂತರವೇ ನಾನು ದೆಹಲಿಗೆ ಕಾಲಿಡುತ್ತೇನೆ ಎಂದು ಗುಡುಗಿದರು.

ಬಂಗಾಳದಲ್ಲಿ ನಾನು ಯಾವುದೇ ಕಾರಣಕ್ಕೂ NRC ಅನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಗುಡುಗಿದ ದೀದಿ , ಅನೇಕರು ಸುವರ್ಣ ಬಂಗಾಳ ರಚಿಸುವ ಬಗ್ಗೆ ಮಾತನಾಡುತ್ತಾರೆ, ಆದರೆ ಬಂಗಾಳದ ಮೂಲ ಜನರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುತ್ತಿದ್ದಾರೆ ಎಂದು ಹರಿಹಾಯ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !