ಕೊವ್ಯಾಕ್ಸಿನ್ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಪ್ರಹಾರ, ಪಾಶ್ಚಾತ್ಯರ ಲಾಬಿ ಅಂಗಳಕ್ಕಿಳಿಯಿತಾ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವಿಶ್ವಸಂಸ್ಥೆಯ ಏಜೆನ್ಸಿಗಳ ಮೂಲಕ ನಾನಾ ದೇಶಗಳಿಗೆ ವಿತರಣೆಯಾಗುತ್ತಿದ್ದ ಭಾರತದ ಕೊವ್ಯಾಕ್ಸಿನ್ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಸದ್ಯಕ್ಕೆ ತಡೆ ಹಿಡಿದಿದೆ. ತಾನು ಮಾರ್ಚ್ 14ರಿಂದ 22ರವರೆಗೆ ನಡೆಸಿದ ತಪಾಸಣೆಯಲ್ಲಿ ಕೆಲವು ಕೊರತೆ ಕಂಡುಬಂದಿದ್ದು ಅದನ್ನು ತಿದ್ದಿಕೊಳ್ಳುವವರೆಗೆ ಭಾರತ್ ಬಯೊಟೆಕ್ ಮಾಡಿರುವ ಕೋವಿಡ್ ವಿರುದ್ಧದ ಲಸಿಕೆ ವಿತರಣೆ ಇರುವುದಿಲ್ಲ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ವಿವರಣೆ.

ಆದರೆ ಇದೇ ವಿಶ್ವ ಆರೋಗ್ಯ ಸಂಸ್ಥೆ ಅದರ ಬೆನ್ನಲ್ಲೇ, ಅದೇ ಉಸುರಿನಲ್ಲೇ ಹೇಳಿರುವುದೇನು ಗೊತ್ತಾ? ಲಸಿಕೆ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದರಲ್ಲಿ ಎರಡು ಮಾತಿಲ್ಲ ಅನ್ನೋದು!

ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳುವುದಕ್ಕೆ ಲಸಿಕೆ ತಯಾರಕರಿಗೆ ಹೇಳಿದ್ದೇವೆ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ ಆ ಸುಧಾರಣೆಗಳು ಅಥವಾ ಈಗ ಕಂಡುಬಂದಿರುವ ನ್ಯೂನತೆ ಏನು ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಭಾರತ್ ಬಯೊಟೆಕ್ ಸಹ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಆದರೆ, ಈ ಗೊಂದಲಮಯ ನಡೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅನುಮಾನ ವ್ಯಕ್ತಪಡಿಸುವುದಕ್ಕೆ ಕಾರಣವಾಗಿದೆ. ಪ್ರಸಕ್ತ ಉಕ್ರೇನ್-ರಷ್ಯ ಸಂಘರ್ಷ ಸಂದರ್ಭದಲ್ಲಿ ಭಾರತ ಪಾಶ್ಚಾತ್ಯ ಒತ್ತಡಗಳಿಗೆ ಮಣಿಯದೇ ತನ್ನದೇ ಹಾದಿ ಅನುಸರಿಸುತ್ತಿರುವುದರ ವಿರುದ್ಧ ಈ ರೀತಿ ಕಿರಿಕಿರಿಗಳನ್ನು ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನಗಳೂ ಹೊಯ್ದಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!