ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ಬಿಗ್ ಬಾಸ್ ಸೀಸನ್ 11 ಮುಗಿದಿದ್ದು, ಮುಂದಿನ ಸೀಸನ್ ನಿಂದ ಕಿಚ್ಚ ಹೋಸ್ಟ್ ಮಾಡೋದಿಲ್ಲ. ಹಾಗಾದರೆ ಮುಂದಿನ ಹೋಸ್ಟ್ ಯಾರು? ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭವಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ರಮೇಶ್ ಅರವಿಂದ್, ಶಿವಣ್ಣ ನಿರೂಪಣೆ ಮಾಡಬಹುದು ಅಂತೆಲ್ಲ ಜನ ಮಾತನಾಡಿಕೊಂಡಿದ್ದಾರೆ. ಆದರೆ ಒಬ್ಬರ ಹೆಸರು ಮಾತ್ರ ಬಲವಾಗಿ ಕೇಳಿ ಬರುತ್ತಿದೆ ಅದೇ ರಮೇಶ್ ಅರವಿಂದ್.
ಸೋಷಿಯಲ್ ಮೀಡಿಯಾ ಚರ್ಚೆ ಪ್ರಕಾರ, ರಮೇಶ್ ಅರವಿಂದ್ ಸೀಸನ್ 12ರಿಂದ ಬಿಗ್ ಬಾಸ್ ಹೋಸ್ಟ್ ಮಾಡಲಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡದಲ್ಲಿ ಕಿಚ್ಚನಂತೆ ಸ್ಪಷ್ಟ ಕನ್ನಡ ಮತ್ತು ದೃಢವಾಗಿ ನಿರೂಪಣೆ ಮಾಡುವ ಗತ್ತು ಇರುವುದು ರಮೇಶ್ ಅರವಿಂದ್ ರಲ್ಲಿ ಮಾತ್ರ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ.