ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿಗೆ ಹೋದ ನಂತರ ಅವರ ಉತ್ತರಾಧಿಕಾರಿಯನ್ನು ಘೋಷಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. “ಎಎಪಿ ನಾಯಕ ವೈದ್ಯಕೀಯ ಕಾರಣಗಳಿಗಾಗಿ ತನ್ನ ಜಾಮೀನನ್ನು ಒಂದು ವಾರ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವುದರಲ್ಲಿ ಯಾವುದೇ ಅಪಾಯ ಅಥವಾ ಬೆದರಿಕೆ ಇದೆ ಎಂದು ನಾನು ಹೇಳುತ್ತಿಲ್ಲ. ಇದನ್ನು ಸುಪ್ರೀಂ ಕೋರ್ಟ್ ನಿರ್ಧರಿಸುತ್ತದೆ ಎಂದು ಹೇಳಿದರು.
ನೀವು ಭ್ರಷ್ಟಾಚಾರ ಮಾಡಿದ್ದೀರಿ, ಎಲ್ಲಾ ಭರವಸೆಗಳನ್ನು ಮುರಿದಿದ್ದೀರಿ, ಕೇಜ್ರಿವಾಲ್ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮೂಲಕ ಪಕ್ಷವನ್ನು ಸ್ಥಾಪಿಸಿದರು. ಮೊದಲಿಗೆ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದ ಅವರು ನಂತರ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದರು. ಆದರೆ ಇಂದು ಖಾಂಗ್ರೆಸ್ ಜತೆಗೂಡಿ ಸ್ಪರ್ಧಿಸಿದ್ದಾರೆ. ದೆಹಲಿಯಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ.