ಪ್ಲೇ ಆಫ್ ರೇಸ್‌ನಲ್ಲಿ ಯಾರಿಗೆ ಗೆಲುವು: ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಪಿಎಲ್ ನಲ್ಲಿ ಇಂದು ಬೆಂಗಳೂರು ವಿರುದ್ಧ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಆರ್‌ಸಿಬಿ 10 ಪಂದ್ಯಗಳನ್ನಾಡಿದರೂ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಇನ್ನುಳಿದಿರುವ 4 ಪಂದ್ಯಗಳು ಅತ್ಯಂತ ಮಹತ್ವದ್ದಾಗಿದೆ. ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಎಲ್ಲಾ ಪಂದ್ಯ ಗೆಲ್ಲಲೇಬೇಕು.

ಇನ್ನು ಮುಂಬೈ ಇಂಡಿಯನ್ಸ್ 8ನೇ ಸ್ಥಾನದಲ್ಲಿದೆ. ಆರ್‌ಸಿಬಿ ಹಾಗೂ ಮುಂಬೈ ಎರಡೂ ತಂಡಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ಈ ಹಿಂದಿನ ಹಲವು ಟೂರ್ನಿಗಳಲ್ಲಿ ಮುಂಬೈ ಅಂತಿಮ ಹಂತದಲ್ಲಿ ಗೇರ್ ಬದಲಾಯಿಸಿ ಪ್ಲೇ ಆಫ್ ಹಂತಕ್ಕೇರಿದ ಉದಾಹರಣೆ ಇದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ದಿಟ್ಟ ಹೋರಾಟ ನೀಡಬೇಕಾಗಿದೆ.

ಆರ್‌ಸಿಬಿ 10 ಪಂದ್ಯದಲ್ಲಿ 5 ಗಲುವು 5 ಸೋಲು ಅನುಭವಿಸಿದ್ದರೆ, ಮುಂಬೈ ಕೂಡ 10ರಲ್ಲಿ 5 ಗೆಲುವು 5 ಸೋಲು ಕಂಡಿದೆ. ಇಂದು ಗೆದ್ದ ತಂಡ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ ಸೋತ ತಂಡ 8ನೇ ಸ್ಥಾನಕ್ಕೆ ಕುಸಿತ ಕಾಣಲಿದೆ. ಹೀಗಾಗಿ ಪ್ರತಿ ಪಂದ್ಯಗಳು ಉಭಯ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.

ಮುಂಬೈ ಇಂಡಿಯನನ್ಸ್
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಾಧೇರಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮದ್ವಾಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹನ್‌ಡ್ರಾಫ್

ಆರ್‌ಸಿಬಿ
ವಿರಾಟ್ ಕೊಹ್ಲಿ, ಪಾಫ್ ಡುಪ್ಲೆಸಿಸ್(ನಾಯಕ), ಅನೂಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ವಾನಿಂಡು ಹಸರಂಗ, ಹರ್ಷಲ್ ಪಟೇಲ್, ವಿಜಯ್ ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!