ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಮುಕ್ತಾಯಗೊಂಡಿದ್ದು, ಐದು ರಾಜ್ಯಗಳ ಪೈಕಿ ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು .
ಇದೀಗ ದೇಶದಲ್ಲಿ ಗೆಲುವಿನ ಲೆಕ್ಕಾಚಾರ ಶುರುವಾಗಿದ್ದು, ಚುನಾವಣೋತ್ತರ ಸಮೀಕ್ಷೆ ಗಳು ನಡೆಯುತ್ತಿದೆ.
ರಿಪಬ್ಲಿಕ್ ಟಿವಿ ಹಾಗೂ ಪಿ ಮಾರ್ಕ್( P MARQ ) ಪ್ರಕಾರ , ಮಣಿಪುರದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದ್ದು, ಮತ್ತೆ ಅಧಿಕಾರ ಗದ್ದುಗೆ ಏರಲಿದೆ.
60 ಸ್ಥಾನಗಳ ಪೈಕಿ ಬಿಜೆಪಿಗೆ ಹೆಚ್ಚು ಸ್ಥಾನ ಸುಮಾರು 31 ರಿಂದ 37 ದಾಟಲಿದೆ. ಈ ಮೂಲಕ ಮತ್ತೊಮ್ಮೆ ಅಧಿಕಾರ ಗದ್ದುಗೇರಲಿದೆ. ಇಲ್ಲಿ ಮ್ಯಾಜಿಕ್ ನಂಬರ್ 31ಆಗಿದ್ದು, ಹೀಗಾಗಿ ಸುಲಭವಾಗಿ ಗೆಲುವಿನ ದಡ ಸೇರಲಿದೆ.
ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ , ಬಿಜೆಪಿಗೆ 31-37 ಸ್ಥಾನ ಸಿಗಲಿದ್ದು, ಕಾಂಗ್ರೆಸ್ ಗೆ 13-19 ಸ್ಥಾನ ಬರುವ ಸಾಧ್ಯತೆವಿದೆ. ಇದರ ಹೊರತಾಗಿ ಎನ್‌ಪಿಪಿ ಪಕ್ಷವು 3 ರಿಂದ 9 ಸ್ಥಾನ, ಎನ್‌ಪಿಎಫ್ ಪಕ್ಷವು 1 ರಿಂದ 5 ಸ್ಥಾನ, ಇತರರು 0 ರಿಂದ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Zee News-DesignBoxed ಪ್ರಕಾರ, ಬಿಜೆಪಿ 33-37 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 13-17 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, NPF 4-6 ಸ್ಥಾನಗಳನ್ನು ಮತ್ತು NPP ಕೇವಲ 2-4 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು.