March 16, 2026
Monday, March 16, 2026
spot_img

CINE | ಪ್ರೇಮ್‌ ಯಾಕೆ ಇಂಥ ಸಾಹಿತ್ಯ ಬರೆದ್ರು? ʼಸರ್ಸೆʼ ಹಾಡು ಅಸಹ್ಯ ಎಂದ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಲ್ಲಾ ಸಿನಿಮಾಗಳಲ್ಲಿಯೂ ಯಾರಾದರೂ ಸ್ಪೆಷಲ್‌ ಗೆಸ್ಟ್‌ನ್ನು ಕರೆಸಿ ಡ್ಯಾನ್ಸ್‌ ಮಾಡಿಸೋದು ಕಾಮನ್‌ ಆಗಿಬಿಟ್ಟಿದೆ. ಈ ರೀತಿ ಡ್ಯಾನ್ಸ್‌ ನಂಬರ್‌ ಫೇಮಸ್‌ ಆಗುತ್ತದೆ, ಆದರೆ ಅದರ ಲಿರಿಕ್ಸ್‌ ಹೇಳಿಕೊಳ್ಳುವಂತೆ ಇರೋದಿಲ್ಲ. ಡಬಲ್‌ ಮೀನಿಂಗ್‌ ಸಾಹಿತ್ಯ ಜನರಿಗೆ ಇಷ್ಟವಾಗೋದಿಲ್ಲ. ಇದೀಗ ಪ್ರೇಮ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆಡಿಯಲ್ಲಿ ನೋರಾ ಫತೇಹಿ ಡ್ಯಾನ್ಸ್‌ ನಂಬರ್‌ ಇದೆ.

ಇದಕ್ಕೆ ಖುದ್ದು ಪ್ರೇಮ್‌ ಲಿರಿಕ್ಸ್‌ ಬರೆದಿದ್ದಾರೆ. ಸರ್ಸೆ ಸೆರಗು ಸರ್ಸೆ ಹಾಡಿಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಟೀಕೆ ಎದುರಾಗಿದೆ. ಈ ಹಾಡಿನ ಸಾಹಿತ್ಯದಲ್ಲಿ ಮದ್ಯಪಾನದ ಬಗ್ಗೆ ಹೇಳಲಾಗಿದ್ದರೂ ಕೂಡ ಡಬಲ್ ಮೀನಿಂಗ್ ಇದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಜನರಿಂದ ಈ ಹಾಡಿಗೆ ನೆಗೆಟಿವ್ ಕಮೆಂಟ್​ಗಳು ಬಂದಿವೆ.

ಇಷ್ಟು ಕಳಪೆ ಸಾಹಿತ್ಯದ ಹಾಡು ನಿರ್ದೇಶಕ ಪ್ರೇಮ್ ಅವರ ಸಿನಿಮಾದಲ್ಲಿ ಇರುತ್ತದೆ ಅಂದುಕೊಂಡಿರಲಿಲ್ಲ. ಅದರಲ್ಲೂ ಅವರೇ ಬರೀತಾರೆ ಅಂತ ಅಂದ್ಕೊಂಡಿರಲಿಲ್ಲ. ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಎಂಬಂತಹ ಹಾಡು ಬರೆದ ಪ್ರೇಮ್ ಅವರಿಂದ ಇಷ್ಟು ಕಳಪೆ ಮಟ್ಟದ ಸಾಹಿತ್ಯ ಬಂದಿರುವುದು ಇದೇ ಮೊದಲು. ಪ್ರೇಮ್ ಅವರೇ, ನಿಮ್ಮ ಮೇಲೆ ಗೌರವ ಇದೆ. ಆದರೆ ಕನ್ನಡಕ್ಕೆ ಇಂಥ ಹಾಡು ಬೇಡ ಎಂದು ಪ್ರೇಕ್ಷಕರು ಹೇಳ್ತಿದ್ದಾರೆ.

ಇದೇ ಹಾಡಿನ ಹಿಂದಿ ಸಾಹಿತ್ಯಕ್ಕೂ ಭಾರೀ ಟೀಕೆ ಎದುರಾಗಿದ್ದು, ಖ್ಯಾತ ಗಾಯಕ ಅರ್ಮಾನ್‌ ಮಲಿಕ್‌ ಟ್ವೀಟ್‌ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !