ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಗೇಮ್ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದ ಗೋಲ್ಡ್ ಸುರೇಶ್ ಇದ್ದಕ್ಕಿದ್ದಂತೆ ದಿಢೀರ್ ಹೊರಬಂದಿದ್ದರು. ಆದ್ರೆ ಯಾಕೆ ಅರ್ಧಕ್ಕೆ ಬಂದಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಇನ್ನೂ ಹಾಗೆಯೇ ಇದೆ. ಖುದ್ದು ಗೋಲ್ಡ್ ಸುರೇಶ್ ಅವರೇ, ತಾವು ಯಾಕೆ ಬಿಗ್ಬಾಸ್ ಶೋನಿಂದ ಅರ್ಧಕ್ಕೆ ಹೊರಬಂದೆ ಎಂದು ತಿಳಿಸಿದ್ದಾರೆ.
ನಾನೊಬ್ಬ ಬಿಸಿನೆಸ್ಮ್ಯಾನ್. ನನಗೆ ನನ್ನದೆಯಾದ ಅನೇಕ ಬಿಸಿನೆಸ್ ಇವೆ. ಬಿಗ್ಬಾಸ್ಗೆ ಬರುವುದಕ್ಕೂ ಮೊದಲು ಅದರಲ್ಲಿ ಬಿಸಿಯಿದ್ದೆ. ನನ್ನನ್ನು ನಂಬಿ ಹಲವು ಕುಟುಂಬಗಳು ಇವೆ. ಈ ವಿಚಾರ ನನಗೆ ಗೊತ್ತಿತ್ತು. ಬಿಗ್ಬಾಸ್ ಮನೆಗೆ ಹೋಗುವುದಕ್ಕೂ ಮೊದಲು ಈ ಬಗ್ಗೆ ಯೋಚಿಸಿದ್ದೆ. ಬಿಗ್ಬಾಸ್ಗೆ ಹೋದರೆ ಬಿಸಿನೆಸ್ ಯಾರು ನೋಡಿಕೊಳ್ತಾರೆ ಎಂದು ಚಿಂತಿಸಿದ್ದೆ. ತುಂಬಾ ಯೋಚಿಸಿದ ನಂತರ ಮೊದಲ ಬಾರಿಗೆ ನನ್ನ ಧರ್ಮ ಪತ್ನಿಗೆ ಆ ಜವಾಬ್ದಾರಿ ನೀಡಿದ್ದೆ. ಆಕೆಗೆ ಬುಸಿನೆಸ್ನಲ್ಲಿ ಯಾವುದೇ ಅನುಭವ ಇರಲಿಲ್ಲ. ನಾನು ಎಲ್ಲವನ್ನೂ ಒಟ್ಟಿಗೆ ಬಿಟ್ಟು ಹೋಗಿದ್ದರಿಂದ ಅವೆಲ್ಲವನ್ನೂ ನಿಭಾಯಿಸೋದು ಆಕೆಗೆ ಕಷ್ಟವಾಗಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಕೆ ಮಾನಸಿಕವಾಗಿ ಕುಗ್ಗಿ ಹೋದಳು. ಇದರಿಂದ ನಾನು ಬಿಗ್ಬಾಸ್ ಮನೆಯಿಂದ ಆಚೆ ಬಂದೆ ಎಂದಿದ್ದಾರೆ.
ಬಿಗ್ಬಾಸ್ ಮನೆಯಿಂದ ಆಚೆ ಬಂದಿರೋ ಬಗ್ಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿರೋರ ಬಗ್ಗೆ ಪ್ರತಿಕ್ರಿಯಿಸಿ.. ಹಾಗೆಲ್ಲ ಮಾಡುತ್ತಿರೋರು ಕೂಡ ನನ್ನ ಸ್ನೇಹಿತರೇ ಎಂದು ಭಾವಿಸುತ್ತೇನೆ. ನನ್ನ ಸ್ನೇಹಿತರಿಗೆ ಒಳ್ಳೆಯದಾಗಲಿ. ನನ್ನ ಜೊತೆಗೆ ಇರೋರೇ ಹಾಗೆ ಮಾಡಿರಬಹುದು. ಯಾರು ಮಾಡಿದ್ದಾರೋ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.