ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ?: ಉಮಾಪತಿಗೆ ಟಾಂಗ್ ಕೊಟ್ಟ ದರ್ಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕಾಟೇರ’ ಸಿನಿಮಾದ 50 ದಿನ ಪೂರೈಸಿದ ಖುಷಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿನಟ ದರ್ಶನ್, ಮಾಜಿ ಗೆಳೆಯ ಉಮಾಪತಿ ಶ್ರೀನಿವಾಸ್​ ಗೆ ಟಾಂಗ್ ಕೊಟ್ಟಿದ್ದಾರೆ.

‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದಾಗಿ ಉಮಾಪತಿ ಶ್ರೀನಿವಾಸ್ ಈ ಹಿಂದೆ ಹೇಳಿದ್ದರು. ಇದೀಗ ದರ್ಶನ್ ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದು ಹೇಳಿಕೆ ನೀಡಿರುವ ಉಮಾಪತಿ ಶ್ರೀನಿವಾಸ್‌ರವರಿಗೆ ಕ್ಲಾರಿಟಿ ನೀಡಿದ್ದಾರೆ.

ಕೆಲವರು ಹೇಳಿದರು ಕಥೆ ನಾನು ಮಾಡಿಸಿದೆ ಟೈಟಲ್ ನಾನು ಕೊಟ್ಟೆ ಅಂತ. ಅಯ್ಯೋ ತಗಡೇ. ನಿನಗೆ ರಾಬರ್ಟ್‌ ಕಥೆ ಕೊಟ್ಟಿದ್ದೇ ನಾವು. ಯಾವತ್ತೂ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಭಗವಂತ…ಈಗಾಗಲೆ ಒಂದು ಸಲ ಸಿಗಾಕೊಂಡು ಬಾಯಿಂದ ಹೇಳಿಸಿಕೊಂಡು ಬುದ್ಧಿ ಕಲಿತಿಲ್ಲ ಅಂದ್ರೆ ನಾವು ಏನ್ ಹೇಳೋಣ. ಇಂಥ ಹಳ್ಳೆ ಕಥೆಯನ್ನು ಯಾಕಪ್ಪಾ ಬಿಟ್ಟೆ ನೀನು?ನೀನು ಮಾಡಿಸಿ ಅಂದ್ಮೇಲೆ ಯಾಕೆ ಕಥೆ ಬಿಟ್ಟೆ? ನಿನ್ನ ಜಡ್ಜ್‌ಮೆಂಟ್ ಅಷ್ಟು ಚೆನ್ನಾಗಿದೆ ಅಂದ್ಮೇಲೆ ಸಿನಿಮಾ ಮಾಡ್ಬೋದಿತ್ತು ಅಲ್ವಾ? ಟೈಟಲ್ ನಾನು ಕೊಟ್ಟೆನಾ?……ಟೈಟಲ್ ಇಟ್ಟಿದ್ದೇ ನಾನು. ಅದಕ್ಕೊಂದು ಕ್ಲಾರಿಟಿ ಕೊಡುತ್ತೀನಿ. ಎಲ್ಲಾ ಆಧಾರ ಇಟ್ಟುಕೊಂಡು ಮಾತನಾಡಬೇಕು ಏಕೆಂದರೆ ನಾವು ಸುಳ್ಳು ಹೇಳುತ್ತಿದ್ದೀವಿ ಅಂತಾರೆ ಆಮೇಲೆ’ ಎಂದು ದರ್ಶನ್ ತೀರುಗೇಟು ನೀಡಿದರು.

ಅಂದು ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸುವಂತೆ ತರುಣ್ ಸುಧೀರ್‌ಗೆ ಹೇಳಿದ್ದೆ ಎಂದರು, ಬಳಿಕ ವೇದಿಕೆಯಲ್ಲಿ ಡೈರೆಕ್ಟರ್ ತರುಣ್ ಬಳಿಯೇ ದರ್ಶನ್ ಸ್ಪಷ್ಟನೆ ಕೊಡಿಸಿದ್ದರು.ಯಾಕಪ್ಪ, ಯಾವಾಗಲೂ ಬಂದು ಬಂದು ನಮ್ಮ ಕೈಯಲ್ಲೇ ಗುಮ್ಮಿಸಿಕೊಳ್ತಿಯಾ? ಗುಮ್ಮಿಸಿಕೊಳ್ಳಬೇಡ ಅಂತ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಎಲ್ಲೋ ಇದ್ಯಾ ಚೆನ್ನಾಗಿ ಇರು. ತಪ್ಪು ಇದು ಅಂತ ದರ್ಶನ್ ಹೇಳಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!