ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶವೇ. ಆದರೆ ಸಕ್ಕರೆ ತಿಂದರೂ ಆರೋಗ್ಯಕ್ಕೆ ಕೆಲವು ಲಾಭಗಳಿವೆ. ಯಾವ ಲಾಭ ನೋಡಿ?
ತಕ್ಷಣವೇ ಎನರ್ಜಿ ನೀಡುತ್ತದೆ, ಗಮನಿಸಿದ್ದೀರಾ? ತುಂಬಾ ಸುಸ್ತು ಅಥವಾ ಹಸಿವಾದಾಗ ಒಂದು ಚಾಕೋಲೆಟ್ ಬಾಯಿಗೆ ಹಾಕಿಕೊಂಡ್ರೂ ಎನರ್ಜಿ ಸಿಗುತ್ತದೆ. ಇದು ಸಕ್ಕರೆಯ ಪವರ್.
ನಿಮ್ಮ ದೇಹದಲ್ಲಿ ಗ್ಲುಕೋಸ್ ಸ್ಟೋರ್ ಆಗಿದ್ದು, ಯಾವಾಗ ಸುಸ್ತಾಗುತ್ತದೋ ಆಗ ಬಳಸಿಕೊಳ್ಳುತ್ತದೆ. ಸಿಹಿ ತಿಂಡಿ ತಿಂದರೆ ಹೆಚ್ಚು ಸಮಯ ಹಸಿವಾಗೋದಿಲ್ಲ.
ಮೂಡ್ ಚೆನ್ನಾಗಿಲ್ಲ ಎಂದಾದರೆ ಸ್ವಲ್ಪ ಸಿಹಿ ತಿನ್ನಿ, ನಿಮ್ಮ ಮೂಡ್ ಏಕಾಏಕಿ ಬ್ರೈಟ್ ಆಗುತ್ತದೆ. ಖುಷಿ ಆಗುತ್ತದೆ.