Thursday, September 21, 2023

Latest Posts

HEALTH | ಮಗು ಆದ ಬಳಿಕ ದಪ್ಪ ಆಗೋದ್ಯಾಕೆ? ಮತ್ತೆ ಫಿಟ್ ಆಗೋಕೆ ಹೀಗೆ ಮಾಡಿ..

ಗರ್ಭಿಣಿಯಾದಾಗ ಸಾಮಾನ್ಯವಾಗಿಯೇ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಮಗುವಿನ ಆರೋಗ್ಯಕರ ಬೆಳವಣಿಗೆಗೆ ತೂಕ ಹೆಚ್ಚಳ ಸಹಕಾರಿಯೂ ಆಗುತ್ತದೆ. ಅಲ್ಲದೆ ಪ್ರೆಗ್ನೆನ್ಸಿ ಸಮಯದ ಕ್ರೇವಿಂಗ್ಸ್‌ನಿಂದ ಕೆಲವೊಮ್ಮೆ ಜಂಕ್ ಫುಡ್ ಸೇವನೆ ಮಾಡಲಾಗುತ್ತದೆ. ಎಲ್ಲ ಸೇರಿ ಒಟ್ಟಾರೆ ತೂಕ ಹೆಚ್ಚುತ್ತದೆ. ಹೆರಿಗೆ ನಂತರ ಈ ತೂಕ ಇಳಿಸಿ ಮೊದಲಿನಂತೆ ಫಿಟ್ ಆಗಲು ಹರಸಾಹಸ ಮಾಡಬೇಕಾಗುತ್ತದೆ. ತೂಕ ಇಳಿಸಲು ಹೊರಟಿರುವ ತಾಯಂದಿರಿಗೆ ಇಲ್ಲಿದೆ ಕೆಲ ಟಿಪ್ಸ್..

  • ಒಂದೇ ತಿಂಗಳಲ್ಲಿ ಸಣ್ಣ ಆಗಿ ಬಿಡುತ್ತೇನೆ ಎನ್ನುವ ಆಲೋಚನೆ ಬೇಡ, ಗೋಲ್ ರಿಯಾಲಿಟಿಗೆ ಹತ್ತಿರ ಇರಲಿ.
  • ಇಂಟರ್‌ನೆಟ್‌ಗಳಲ್ಲಿ ನೋಡಿದ ಯಾವ್ಯಾವುದೇ ಡಯಟ್ ವಿಧಾನ ಅನುಸರಿಸಬೇಡಿ, ವೈದ್ಯರ ಸಲಹೆಯಂತೆ ವರ್ತಿಸಿ.
  • ಮಗುವಿಗೆ ಎದೆಹಾಲು ಕುಡಿಸಿ, ಇದರಿಂದಲೂ ಕ್ಯಾಲೋರಿ ಬರ್ನ್ ಆಗುತ್ತದೆ.
  • ಎಷ್ಟು ತಿನ್ನುತ್ತೀರಿ, ಯಾವ ಆಹಾರ ತಿನ್ನುತ್ತೀರಿ ಎನ್ನುವುದು ಗಮನ ಇರಲಿ.
  • ಹೆಚ್ಚು ಫೈಬರ್ ಇರುವ ಆಹಾರ ಸೇವಿಸಿ
  • ನಿಮ್ಮ ಆರೋಗ್ಯದ ಸ್ಥಿತಿ ಅನ್ವಯ ವ್ಯಾಯಾಮ ಮಾಡಿ
  • ಜಂಕ್ ಫುಡ್‌ಗಳ ಸೇವನೆ ಬಿಟ್ಟುಬಿಡಿ
  • ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಿ
  • ಮನೆಯಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿ
  • ಮಗುವನ್ನು ಎತ್ತಿಕೊಂಡು ಕೆಲಸ ಮಾಡಿ, ಮಗು ತೂಕ ಕೂಡ ನಿಮ್ಮ ವರ್ಕೌಟ್‌ಗೆ ಸೇರಲಿ.
  • ಮಾನಸಿಕವಾಗಿ ಗಟ್ಟಿ ಇರಿ, ತೂಕದ ಬಗ್ಗೆ ಹೆಚ್ಚು ಗಮನ ಕೊಡಬೇಡಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!