ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಅಭಿನಯದ ಸಿಖಂದರ್ ಇನ್ನೇನು ರಿಲೀಸ್‌ಗೆ ರೆಡಿ ಇದೆ. ಸಿನಿಮಾದ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಆಗಿವೆ. ಫಿಲಂ ಹಾಡುಗಳನ್ನು ನೋಡಿದ ಕೆಲ ನೆಟ್ಟಿಗರು ಸಲ್ಮಾನ್ ಹಾಗೂ ರಶ್ಮಿಕಾ ಜೋಡಿ ಚೆನ್ನಾಗಿಲ್ಲ ಎಂದಿದ್ದಾರೆ. ಅಪ್ಪ-ಮಗಳಷ್ಟು ಅಂತ ಇರೋ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ.
ಇದಕ್ಕೆ ಸಲ್ಮಾನ್ ಡೈರೆಕ್ಟ್ ಆಗಿಯೇ ಆನ್ಸರ್ ನೀಡಿದ್ದಾರೆ. ರಶ್ಮಿಕಾ ತಂದೆಯೇ ಸಿನಿಮಾ ಬಗ್ಗೆ, ನಮ್ಮ ವಯಸ್ಸಿನ ಅಂತರದ ಬಗ್ಗೆ ಮಾತನಾಡಿಲ್ಲ. ಇನ್ನು ನೀವ್ಯಾಕೆ ಹೀಗಾಡ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ರಶ್ಮಿಕಾ ಮದುವೆಯಾಗಿ ಅವರ ಮಗಳು ಇಂಡಸ್ಟ್ರಿಗೆ ಬಂದರೂ ಅವಳ ಜೊತೆಯೂ ಆಕ್ಟ್ ಮಾಡುತ್ತೇನೆ ಎಂದು ಸಲ್ಮಾನ್ ಹೇಳಿದ್ದಾರೆ.
ರಶ್ಮಿಕಾ ಹಾಗೂ ಸಲ್ಮಾನ್ ನಡುವೆ 31 ವರ್ಷದ ಅಂತರವಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಸಲ್ಮಾನ್ ನಗುತ್ತಲೇ ಹೊಡೆಯುವಂಥ ರಿಪ್ಲೇ ನೀಡಿದ್ದಾರೆ.