ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಸ್ಟಾರ್ ಹೀರೋ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ವರ್ಷಕ್ಕೆ ಮೂರರಿಂದ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತವೆ. ಅವರ ಸಿನಿಮಾಗಳು ಸತತ ಸೋಲು ಕಂಡರೂ ಸಿನಿಮಾ ಮಡೋದನ್ನು ಮಾತ್ರ ಅವರು ನಿಲ್ಲಿಸಿಲ್ಲ. ಅವರು ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ‘ಭೂಲ್ ಭುಲಯ್ಯ’ ಎರಡು ಹಾಗೂ ಮೂರನೇ ಭಾಗಕ್ಕೆ ಅಕ್ಷಯ್ ಕುಮಾರ್ ಬದಲು ಕಾರ್ತಿಕ್ ಆರ್ಯನ್ ನಟಿಸಿದರು. ಸೂಪರ್ ಹಿಟ್ ಸಿನಿಮಾದ ಎರಡನೇ ಪಾರ್ಟ್‌ನಲ್ಲಿ ಅಕ್ಷಯ್ ಯಾಕೆ ಭಾಗಿಯಾಗಿಲ್ಲ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.
ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಸ್ಟಾರ್ ನಟ ಹೌದು. ಆದರೆ, ಅವರ ಸಿನಿಮಾಗಳು ಹೀನಾಯ ಕಲೆಕ್ಷನ್ ಮಾಡುತ್ತಿವೆ. ನಿರ್ಮಾಪಕರಿಗೆ ಅವರಿಂದ ನಷ್ಟವೇ ಹೆಚ್ಚು. ಅಲ್ಲದೆ ಅವರು ದೊಡ್ಡ ಮೊತ್ತದಲ್ಲಿ ಸಂಭಾವನೆ ಪಡೆಯುತ್ತಾರೆ. ಈ ಕಾರಣದಿಂದಲೇ ಅವರನ್ನು ‘ಭೂಲ್ ಭುಲಯ್ಯ 2’ ಚಿತ್ರದಿಂದ ಹೊರಕ್ಕೆ ಇಡಲಾಯಿತು ಎನ್ನುವ ಮಾತಿದೆ. ಈ ಬಗ್ಗೆ ಕೊನೆಗೂ ಅಕ್ಷಯ್ ಮೌನ ಮುರಿದಿದ್ದಾರೆ.
ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ಅವಕಾಶ ಪಡೆದರು. ಈ ವೇಳೆ ಓರ್ವ ಅಭಿಮಾನಿ, ‘ನೀವಿಲ್ಲ ಎಂಬ ಕಾರಣಕ್ಕೆ ಭೂಲ್ ಬುಲಯ್ಯ 2 ಹಾಗೂ ‘ಭೂಲ್ ಭುಲಯ್ಯ 3 ಚಿತ್ರವನ್ನು ವೀಕ್ಷಿಸಿಲ್ಲ’ ಎಂದರು. ಇದಕ್ಕೆ ಅಕ್ಷಯ್ ಉತ್ತರಿಸಿ, ‘ಅವರು ನನ್ನನ್ನು ತೆಗೆದು ಹಾಕಿದರು, ಅಷ್ಟೇ’ ಎಂದಿದ್ದಾರೆ. ಅಕ್ಷಯ್ ಕುಮಾರ್ಗೆ ಈ ಬಗ್ಗೆ ಬೇಸರ ಇದೆ ಎನ್ನಲಾಗಿದೆ.