ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದಾನಿ ಒಬ್ಬ ವೃತ್ತಿಪರ ಅಪರಾಧಿ ಎಂದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಅಪರಾಧ ಹಿನ್ನೆಲೆಯಿರುವ ಅದಾನಿಯವರನ್ನು ಮೋದಿಯವರು ರಕ್ಷಿಸುವುದ್ಯಾಕೆ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಬಂಧನಕ್ಕೆ ಅಮೆರಿಕ ಕೋರ್ಟ್ ವಾರೆಂಟ್ ಹೊರಡಿಸಿದೆ. ಅದಾನಿ ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಿಸಲು ಅಧಿಕಾರಿಗಳಿಗೆ ರೂ 2100 ಕೋಟಿಗೂ ಅಧಿಕ ಲಂಚದ ಅಮಿಷ ಒಡ್ಡಿದ್ದಾರೆ.
ಆ ಲಂಚದ ಹಣವನ್ನು ವಿದೇಶಿ ಹೂಡಿಕೆದಾರರಿಂದ ಪಡೆದ ಆರೋಪದ ಮೇಲೆ ಅದಾನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣದ ಬಳಿಕ ಅದಾನಿ ಒಬ್ಬ ವೃತ್ತಿಪರ ಅಪರಾಧಿ ಎಂದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಅಪರಾಧ ಹಿನ್ನೆಲೆಯಿರುವ ಅದಾನಿಯವರನ್ನು ಮೋದಿಯವರು ರಕ್ಷಿಸುವುದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.