ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರೇಲರ್ ಮೂಲಕ ಧೂಳೆಬ್ಬಿಸಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಕಂಟಕ ಎದುರಾಗಿದೆ.
ಬೃಹತ್ ತಾರಾಗಣ ಇರುವ ಈ ಸಿನಿಮಾಗೆ ಸ್ಯಾಂಡಲ್‌ವುಡ್ ಸಪೋರ್ಟ್ ಸಿಕ್ಕಿದೆ. ಮೋಹಕ ತಾರೆ ರಮ್ಯಾ ಕೂಡ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗೆ ಇನ್ನಷ್ಟು ಹೈಪ್ ಸಿಕ್ಕಿತ್ತು.
ಆದರೆ ಇದಿಗ ನಟಿ ರಮ್ಯಾ ತಮ್ಮದೇ ಸಿನಿಮಾ ವಿರುದ್ಧ ಕೇಸ್ ಹಾಕಿದ್ದಾರೆ. ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು, ಸಿನಿಮಾದಿಂದ ತಮ್ಮ ದೃಶ್ಯವನ್ನು ತೆಗೆದುಹಾಕಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಹಾಸ್ಟೆಲ್ ಹುಡುಗರ ತಂಡಕ್ಕೆ ಸಮಸ್ಯೆಯಾಗಿದೆ. ಶೂಟಿಂಗ್ ಸಮಯದಲ್ಲಿ ರಮ್ಯಾ ತುಂಬಾ ಚೆನ್ನಾಗಿ ಮಾತನಾಡ್ತಿದ್ರು, ಸಿನಿಮಾ ಬಗ್ಗೆ ತುಂಬಾ ಕಾಳಜಿ ವ್ಯಕ್ತಪಡಿಸಿದ್ರು. ಆದರೆ ಇದೀಗ ಏಕೆ ಹೀಗೆ ಮಾಡ್ತಿದ್ದಾರೆ ಗೊತ್ತಿಲ್ಲ, ಇಡೀ ತಂಡಕ್ಕೆ ನೋವುಂಟಾಗಿದೆ ಎಂದು ನಿರ್ಮಾಪಕ ವರುಣ್ ಹೇಳಿದ್ದಾರೆ.