ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ 1ಕ್ಕೆ ಬಜೆಟ್ ಯಾಕೆ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಮುಂದೆ ಓದಿ…
ಕಳೆದ ಕೆಲವು ವರ್ಷಗಳಿಂದ ಬಜೆಟ್ ಮಂಡನೆ ದಿನವನ್ನು ಫೆಬ್ರವರಿ 1ಕ್ಕೆ ನಿಗದಿ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಏಪ್ರಿಲ್‌ನಿಂದ ಶುರುವಾಗುವ ಹಣಕಾಸು ವರ್ಷ. ಅದಕ್ಕೂ ಮುನ್ನ ಫೆಬ್ರುವರಿ ತಿಂಗಳ ಕೊನೆಯ ಕಾರ್ಯದಿನದಂದು ಬಜೆಟ್ ಮಂಡನೆ ಆಗುತ್ತಿತ್ತು.
ಬ್ರಿಟಿಷರ ಕಾಲದಿಂದಲೇ ನಡೆದು ಬಂದಿದ್ದ ಈ ಪದ್ಧತಿಯನ್ನೇ ಕಳೆದ ಕೆಲವು ವರ್ಷಗಳ ತನಕವೂ ಮುಂದುವರಿಸಲಾಗಿತ್ತು. ಆದರೆ, ಇದೀಗ ಬಜೆಟ್ ದಿನವನ್ನು ಫೆಬ್ರುವರಿ 1ಕ್ಕೇ ನಿಗದಿ ಮಾಡಲಾಗಿದೆ. ಈ ಮೂಲಕ ನೂತನ ಹಣಕಾಸು ವರ್ಷದಲ್ಲಿ ಬಜೆಟ್ ಅಂಶಗಳನ್ನು ಅಳವಡಿಸಲು ಸಾಕಷ್ಟು ಸಮಯಾವಕಾಶ ಸಿಗುತ್ತಿದೆ.