ಇದು ಏಕೆ ನಡೆಯುತ್ತಿದೆ?, ಹಠಾತ್​​​ ಏನಾಯಿತು ?: ‘ಭಾರತ’ ಹೆಸರಿಗೆ ​ ಕೇಜ್ರಿವಾಲ್,ಮಮತಾ ಬ್ಯಾನರ್ಜಿ ಪ್ರಶ್ನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಿ – 20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್​ ಆಫ್​ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್​ ಆಫ್​ ಭಾರತ’ ಎಂಬ ಮುದ್ರಣ ಇದೀಗ ಹೊಸ ರೂಪ ತಾಳಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿಗೆ ಇಳಿದಿದೆ.

ಕೆಲ ಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ ರಚಿಸಿವೆ. ಇಂಡಿಯಾ ಒಕ್ಕೂಟದ ಹೆಸರನ್ನು ಭಾರತ ಎಂದು ಬದಲಾಯಿಸಿದರೆ, ಭಾರತಕ್ಕೂ ಮರು ನಾಮಕರಣ ಮಾಡುತ್ತಾರೆಯೇ ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

ಪ್ರೆಸಿಡೆಂಟ್​ ಆಫ್​ ಭಾರತ್’ ಹೆಸರಲ್ಲಿ ಜಿ-20 ಔತಣಕೂಟದ ಆಹ್ವಾನ ಪತ್ರಿಕೆ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ನಾನು ಇಂತಹ ವದಂತಿಯನ್ನು ಕೇಳಿದ್ದೆ. ಇದು ಏಕೆ ನಡೆಯುತ್ತಿದೆ?, ಕೆಲ ಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ ರಚನೆ ಮಾಡಿದೆ. ಮುಂದೆ ಇಂಡಿಯಾ ಒಕ್ಕೂಟವು ಭಾರತ ಎಂದು ತಮ್ಮ ಒಕ್ಕೂಟದ ಹೆಸರನ್ನು ಬದಲಾಯಿಸಿದರೆ, ಅವರು (ಕೇಂದ್ರ ಸರ್ಕಾರ) ಭಾರತಕ್ಕೆ ಎಂದು ಮರುನಾಮಕರಣ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಅಲ್ಲದೇ, ಇದೊಂದು ದೇಶದ್ರೋಹ ಎಂದು ಟೀಕಿಸಿದರು.

ಹಠಾತ್​​​ ಏನಾಯಿತು ?
ತೃಣಮೂಲ ಕಾಂಗ್ರೆಸ್​ ನಾಯಕ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇಂಡಿಯಾ ಎಂದರೆ ಭಾರತವೇ. ಈಗ ನಮ್ಮ ದೇಶವನ್ನು ಭಾರತ ಎಂದು ಮಾತ್ರ ಕರೆಯಬೇಕು ಎನ್ನಲು ಹಠಾತ್​​​ ಏನಾಯಿತು ಎಂದು ಪ್ರಶ್ನಿಸಿದ್ದಾರೆ.

‘ಪ್ರೆಸಿಡೆಂಟ್​ ಆಫ್​ ಭಾರತ’ ಹೆಸರಲ್ಲಿ ಜಿ-20 ಔತಣಕೂಟದ ಆಹ್ವಾನ ಪತ್ರಿಕೆ ವಿವಾದವನ್ನು ಉಲ್ಲೇಖಿಸಿದ ಮಾತನಾಡಿದ ಅವರು, ‘ಇಂಡಿಯಾ’ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂದು ನಾನು ಕೇಳಿದ್ದೆ. ಗೌರವಾನ್ವಿತ ರಾಷ್ಟ್ರಪತಿಗಳ ಹೆಸರಿನಲ್ಲಿ ಹೊರಡಿಸಲಾದ ಜಿ-20 ಆಹ್ವಾನದ ಮೇಲೆ ‘ಭಾರತ್’ ಎಂದು ಬರೆಯಲಾಗಿದೆ. ನಾವು ದೇಶವನ್ನು ಭಾರತ್ ಎಂದು ಕರೆಯುತ್ತೇವೆ, ಇದರಲ್ಲಿ ಹೊಸದೇನಿದೆ?, ಇಂಗ್ಲಿಷ್‌ನಲ್ಲಿ ನಾವು ಇಂಡಿಯಾ ಎಂದು ಹೇಳುತ್ತೇವೆ. ಹೊಸದಾಗಿ ಮಾಡಲು ಏನೂ ಇಲ್ಲ ಎಂದು ಹೇಳಿದರು.

ಜಗತ್ತು ನಮ್ಮನ್ನು ಇಂಡಿಯಾ ಎಂದು ಗುರುತಿಸುತ್ತದೆ. ದೇಶದ ಹೆಸರನ್ನು ಬದಲಾಯಿಸಲು ಇದ್ದಕ್ಕಿದ್ದಂತೆ ಏನಾಯಿತು ಎಂದು ಪ್ರಶ್ನಿಸಿದ ಮಮತಾ, ದೇಶದಲ್ಲಿ ಇತಿಹಾಸವನ್ನು ಪುನಃ ಬರೆಯಲಾಗುತ್ತಿದೆ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!