ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಪ್ತಸಾಗರದಾಚೆ ಎಲ್ಲೋ ಸುಂದರಿ ರುಕ್ಮಿಣಿ ವಸಂತ್ ಇದೀಗ ಡೀಪ್‌ಫೇಕ್ ಬಗ್ಗೆ ಮಾತನಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಮತ್ಯಾರದ್ದೋ ದೇಹಕ್ಕೆ ಅಂಟಿಸಿ, ನಿಜವೇನೋ ಎನ್ನುವಂಥ ವಿಡಿಯೋ ಹರಿಬಿಟ್ಟಿದ್ದರು. ಇದು ನಿಜವಾಗಿಯೂ ಭಯಪಡಬೇಕಾದ ವಿಷಯ.
ಯಾವುದೇ ಹೊಸ ತಂತ್ರಜ್ಞಾನ ಬಂದಾಗಲು ಮೊದಲು ಅದಕ್ಕೆ ಬಲಿಯಾಗೋದೇ ನಟ-ನಟಿಯರು. ವಿಡಿಯೋ ಮಾಡುವವರು ಹೆದರಬೇಕು ಅಂಥ ಶಿಕ್ಷೆಯಾಗಬೇಕು. ಹಾಗೇ ರಶ್ಮಿಕಾ ವಿಡಿಯೋ ಮಾಡಿದವರನ್ನು ಹಿಡಿದು ಗಂಭೀರ ಶಿಕ್ಷೆ ನೀಡಬೇಕು. ಆಗ ಮತ್ಯಾರೋ ಇನ್ಯಾರದ್ದೋ ವಿಡಿಯೋ ಮಾಡುವ ಧೈರ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.