ಮನೆಯೊಳಗೆ ಉಗುರು ಕತ್ತರಿಸಬಾರದೇಕೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನೆಯೊಳಗೆ ಉಗುರು ಕತ್ತರಿಸಿದರೆ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟುತ್ತೀಯಾ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ, ವೈಜ್ಞಾನಿಕವಾಗಿ ಮನೆಯೊಳಗೆ ಉಗುರು ಕತ್ತರಿಸುವುದರಿಂದ ಮನೆಯೊಳಗೆ ಉಗುರು ಬಿದ್ದು ಅದು ಆಹಾರ ಪದಾರ್ಥಗಳಲ್ಲಿ ಸೇರಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಧಾರ್ಮಿಕವಾಗಿ ನೋಡುವುದಾದರೆ, ಉಗುರು ವಿಷ ಅಥವಾ ರಾಕ್ಷಸ ಗುಣದ ಸಂಕೇತವಾಗಿದೆ. ಮಹಾಲಕ್ಷ್ಮಿ ಮನೆಗೆ ಬರುವ ವೇಳೆ ಮನೆಯಲ್ಲಿ ಉಗುರು ಬಿದ್ದಿದ್ದರೆ ಅದು ಮನೆಗೆ ಶುಭವಲ್ಲ ಎಂಬುದು ನಂಬಿಕೆ. ಹಾಗಾಗಿಯೇ ಮನೆಯಲ್ಲಿ ಅದರಲ್ಲೂ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸದಂತೆ ಹಿರಿಯರು ಸೂಚಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!