‘ಸರ್ಕಾರಿ ಬಸ್‌ನಲ್ಲಿ ದುಡ್ಡಿಲ್ದೆ ಹೋಗುವಾಗ ಪ್ರೈವೇಟ್ ಬಸ್‌ಗೆ ಯಾಕೆ ಹತ್ತೋಣ?’ ಇದೇನಪ್ಪಾ ಹೊಸ ಸಮಸ್ಯೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸರ್ಕಾರ ಘೋಷಣೆ ಮಾಡಿದ್ದು, ಮಹಿಳೆಯರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಕಾಂಗ್ರೆಸ್‌ಗೆ ವೋಟ್ ಮಾಡಿದ್ದಕ್ಕೆ ಹೇಳಿದ್ದನ್ನು ಮಾಡಿದ್ದಾರೆ ಎಂದು ಸಂತಸಪಟ್ಟಿದ್ದಾರೆ. ಸರ್ಕಾರ ಸಂಪೂರ್ಣವಾಗಿ ದಿನಗಳೇ ಕಳೆದರೂ ಐದು ಗ್ಯಾರೆಂಟಿಯಲ್ಲಿ ಯಾವ ಗ್ಯಾರೆಂಟಿಯೂ ಘೋಷಣೆಯಾಗಿರಲಿಲ್ಲ. ಅದಾಗಲೇ ಬಸ್‌ಗಳಲ್ಲಿ ಕುಳಿತ ಮಹಿಳೆಯರು ಟಿಕೆಟ್ ಹಣ ನೀಡದೇ ರಂಪ ಮಾಡಿದ್ದರು.

ಹಾಗಾಗಿ ಮೊದಲ ಗ್ಯಾರೆಂಟಿಯನ್ನು ಜಾರಿಮಾಡಲಾಗಿದೆ. ಆದರೆ ಈ ಗ್ಯಾರೆಂಟಿಯಿಂದಾಗಿ ಖಾಸಗಿ ಬಸ್‌ಗಳಿಗೆ ಆತಂಕ ಶುರುವಾಗಿದೆ. ಎಲ್ಲಿಗೆ ಹೋಗುವುದಕ್ಕೂ ಮಹಿಳೆಯರು ಸರ್ಕಾರಿ ಬಸ್‌ಗಳನ್ನೇ ಆರಿಸುತ್ತಿದ್ದಾರೆ. ಸ್ವಲ್ಪ ಸಮಯ ಕಾದರೂ ಪರವಾಗಿಲ್ಲ, ರಶ್ ಇದ್ದರೂ ಪರವಾಗಿಲ್ಲ. ಸರ್ಕಾರಿ ಬಸ್‌ಬೇಕು ಅಂತಿದ್ದಾರೆ ಮಹಿಳೆಯರು.

ಇದೀಗ ಖಾಸಗಿ ಬಸ್‌ಗಳಿಗೆ ಇದರಿಂದ ಸಾಕಷ್ಟು ನಷ್ಟವಾಗಲಿದ್ದು, ಗಂಡ ಹೆಂಡತಿ ಒಟ್ಟಿಗೇ ಬಂದರೂ ಹೆಂಡತಿಗೆ ಫ್ರೀ ಎಂದು ಸರ್ಕಾರಿ ಬಸ್‌ನ್ನು ಆರಿಸಲಾಗುತ್ತಿದೆ. ರೋಡ್ ಟ್ಯಾಕ್ಸ್, ಇನ್ಶೂರೆನ್ಸ್ ಕಟ್ಟೋಕೆ ಆಗದೇ ಒದ್ದಾಡುತ್ತಿರುವ ಬಸ್ ಮಾಲೀಕರು ಇದೀಗ ನಮ್ಮ ದುಡಿಮೆಗೆ ಕಲ್ಲು ಬಿದ್ದಿದೆ ಎನ್ನುತ್ತಿದ್ದಾರೆ.

ಖಾಸಗಿ ಬಸ್‌ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿ, ದಿನಕ್ಕೆ ಎಷ್ಟು ಮಹಿಳೆರಯರು ಪ್ರಯಾಣಿಸಿದ್ದಾರೆ ಎನ್ನುವ ಡೇಟಾ ನೀಡುತ್ತೇವೆ ಎಂದು ಖಾಸಗಿ ಬಸ್ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!