ನಂದಿಯ ಕಿವಿ ಬಳಿ ಹೋಗಿ ತಮ್ಮ ಆಸೆಯನ್ನು ಏನಾದ್ರು ಕೇಳಿಕೊಂಡರೆ ನಿಜ ಆಗುತ್ತೆ ಅನ್ನೋ ನಂಬಿಕೆ. ಹಾಗಿದ್ರೆ ನಂದಿಯ ಯಾವ ಕಿವಿಯಲ್ಲಿ ತಮ್ಮಾಸೆ ಹೇಳಿಕೊಂಡ್ರೆ ಈಡೇರುತ್ತೆ? ಬಲ ಕಿವಿಯಲ್ಲಿಯೋ ಅಥವಾ ಎಡ ಕಿವಿಯಲ್ಲಿಯೋ? ಈ ವಿಷಯದಲ್ಲಿ ಯಾವ ನಿಯಮಗಳನ್ನು ಪಾಲಿಸಬೇಕು? ವಿದ್ವಾಂಸರು ಏನು ಹೇಳುತ್ತಾರೆಂದು ಈ ಸುದ್ದಿಯಲ್ಲಿದೆ ಓದಿ.
ಶಿವನ ವಾಹನವಾದ ನಂದಿಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ನೀವು ಯಾವುದೇ ಶಿವ ದೇವಾಲಯಕ್ಕೆ ಭೇಟಿ ನೀಡಿದರೂ, ಲಿಂಗದ ಕಡೆಗೆ ಮುಖ ಮಾಡಿರುವ ನಂದಿ ಪ್ರತಿಮೆಯನ್ನು ನೀವು ನೋಡಿರಬಹುದು. ನಂದಿ ಯಾವಾಗಲೂ ಶಿವನ ಸೇವೆ ಮಾಡಲು ಸಿದ್ಧನಾಗಿರುತ್ತಾನೆ. ಭಕ್ತರು ತಮ್ಮ ಇಚ್ಛೆಯನ್ನು ದೇವರ ದ್ವಾರಪಾಲಕ ಮತ್ತು ಸೇವಕ ಎಂದು ಕರೆಯಲ್ಪಡುವ ನಂದಿಯ ಕಿವಿಯಲ್ಲಿ ಪಿಸುಗುಟ್ಟಿದರೆ ಅದು ನೇರವಾಗಿ ಶಿವನನ್ನು ತಲುಪುತ್ತದೆ ಎಂದು ನಂಬಲಾಗಿದೆ.
ಶಿವನಿಗೆ ನಂದಿಯೆಂದರೆ ತುಂಬಾ ಪ್ರೀತಿ. ಆದ್ದರಿಂದ ನಂದಿ ಹೇಳುವುದನ್ನೆಲ್ಲಾ ಶಿವ ಕೇಳುತ್ತಾನೆ ಎಂಬ ನಂಬಿಕೆ. ಅದಕ್ಕಾಗಿಯೇ ನಂದಿಯನ್ನು ಭಕ್ತರು ಪೂಜಿಸುತ್ತಾರೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ನಂದಿಗೆ ಹೇಳಿದರೆ, ಅವುಗಳನ್ನು ಖಂಡಿತವಾಗಿ ಪೂರೈಸುವುದಾಗಿ ಶಿವನು ವರವನ್ನು ನೀಡಿದ್ದನೆಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ, ಶಿವ ಬಹುತೇಕ ಧ್ಯಾನದಲ್ಲೇ ಇರುತ್ತಿದ್ದರಂತೆ. ಈ ಸಂದರ್ಭದಲ್ಲಿ ನಂದಿ ತನ್ನ ಧ್ಯಾನಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತಾನಂತೆ.
ನೀವು ನಂದಿಯ ಮುಂದೆ ಯಾವ ಕಿವಿಯಲ್ಲಿ ನಿಮ್ಮ ಇಚ್ಛೆಯನ್ನು ಪಿಸುಗುಟ್ಟುತ್ತೀರಿ ಎಂಬುದು ಮುಖ್ಯ. ಅಲ್ಲದೇ ಎಡ ಕಿವಿಯಲ್ಲಿ ನಿಮ್ಮಾಸೆಯನ್ನು ನಂದಿಯಲ್ಲಿ ಹೇಳಿಕೊಂಡರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇನ್ನು ನಂದಿಯ ಕಿವಿಯಲ್ಲಿ ನೀವು ಏನು ಹೇಳುತ್ತೀರೋ ಅದು ಯಾರಿಗೂ ಕೇಳಿಸಬಾರದು, ಆದರೆ ಅದನ್ನು ಸ್ಪಷ್ಟವಾಗಿ ಹೇಳಬೇಕು. ನಿಮ್ಮ ಆಶಯಗಳನ್ನು ಇತರರು ಕೇಳದಂತೆ ನೀವು ಹೇಳಬೇಕು.