ಫ್ರೆಂಡ್​ ಗೆ ಯಾಕೆ ದಿನಾ ನೀನೇ ಲಿಫ್ಟ್ ಕೊಡಬೇಕು?: ಅಮ್ಮನ ಪ್ರಶ್ನೆಗೆ ನೊಂದು ಮಗಳು ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನ ಫ್ರೆಂಡ್​ ಗೆ ಯಾಕೆ ದಿನಾ ನೀನೇ ಲಿಫ್ಟ್​ ಕೊಡಬೇಕು ಅವರ ಮನೆಯಲ್ಲಿ ವಾಹನ ಇಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ವಡೋದರಾದಲ್ಲಿ ನಡೆದಿದೆ.

ಈ ಹಿಂದೆ ತರಗತಿಯಲ್ಲಿ ಫೇಲ್ ಆದರೆ ಮನೆಯಲ್ಲಿ ಏನೆನ್ನುತ್ತಾರೋ ಎನ್ನುವ ಆಲೋಚನೆಯಲ್ಲಿ ತಿಳಿಯದೇ ಮಕ್ಕಳು ಆತ್ಮಹತ್ಯೆಂತಹ ದಾರಿ ತುಳಿದುಬಿಡುತ್ತಿದ್ದರು. ಆದರೆ ಈಗ ಮನೆಯವರು ಸಣ್ಣ ಪುಟ್ಟ ಪ್ರಶ್ನೆಗಳನ್ನು ಕೇಳಿದರೂ ಅದನ್ನು ಕೇಳುವ ಶಾಂತ ಸ್ವಭಾವ ಮಕ್ಕಳಿಗಿಲ್ಲವಾಗಿದೆ.

ಎರಡು ದಿನಗಳ ಹಿಂದೆ, ತನ್ನ ಮಗಳು ದಿನ ಸ್ನೇಹಿತನಿಗೆ ಲಿಫ್ಟ್ ನೀಡುವುದನ್ನು ತಾಯಿ ವಿರೋಧಿಸಿದ್ದರು. ಫ್ರೆಂಡ್​ ತನ್ನ ಮಗಳನ್ನು ಅವಲಂಬಿಸುವ ಬದಲು ಸ್ವಂತ ವಾಹನವನ್ನು ಏಕೆ ಬಳಸಬಾರದು ಎಂದು ತಾಯಿ ಪ್ರಶ್ನಿಸಿದ್ದರು.

ಇದರಿಂದ ನೊಂದ ಬಾಲಕಿ ತನ್ನ ತಮ್ಮನೊಂದಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಾಲಕಿಯ ತಾಯಿಗೆ ಮನೆಯ ಜವಾಬ್ದಾರಿ ಸಂಪೂರ್ಣವಾಗಿ ಹೆಗಲಮೇಲಿದೆ. ಅವರು ನಾಲ್ಕೈದು ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಕೆಲಸದಿಂದ ಮನೆಗೆ ಹಿಂದಿರುಗಿದಾಗ ಮಗಳು ನೇಣು ಬಿಗಿದಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಸ್ಥಳದಿಂದ ಆಕೆಯ ತಾಯಿಗೆ ಬರೆದಿರುವ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಬಾಲಕಿ ತನ್ನ ತಾಯಿಗೆ ಪತ್ರ ಬರೆದು, “ಅಮ್ಮ, ನಿಮ್ಮ ಮಗಳು ನಿಮ್ಮ ನಿಯಂತ್ರಣದಲ್ಲಿಲ್ಲ. ಎಲ್ಲರೂ ಸಂತೋಷವಾಗಿರಬೇಕು. ನಾನು ಹೋಗುತ್ತಿದ್ದೇನೆ ಎಂದು ಬರೆದಿದ್ದಾಳೆ. ಎರಡು ದಿನಗಳ ಹಿಂದೆ ಮಗಳು ಆಗಾಗಾ ಸ್ನೇಹಿತನೊಂದಿಗೆ ಓಡಾಡುತ್ತಿರುವುದಕ್ಕೆ ಗದರಿಸಿದ್ದಾಗಿ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!