WHY SO ? | ನಿರ್ಮಾಣವಾಗುತ್ತಿರುವ ಬಿಲ್ಡಿಂಗ್‌ಗೆ ಹಸಿರು ಬಣ್ಣದ ನೆಟ್ ಯಾಕೆ ಹಾಕ್ತಾರೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!

ಒಮ್ಮೆಯಾದರೂ ನಿಮ್ಮ ಸುತ್ತಲೂ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ನೋಡಿರುತ್ತೀರಿ. ಈ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಹಸಿರು ಬಟ್ಟೆ ಅಥವಾ ಹಸಿರು ನೆಟ್ ಅನ್ನು ಹಾಕಿರುತ್ತಾರೆ, ಅದು ಯಾಕೆ ಅಂತ ಯೋಚಿಸಿದ್ದೀರಾ? ಈ ನೆಟ್ ಹಾಕಿರುವುದರ ಹಿಂದೆ ಒಂದು ಕಾರಣವಿದೆ.

ನಿರ್ಮಾಣದ ಸಮಯದಲ್ಲಿ ಧೂಳು, ಮಣ್ಣು, ಜಲ್ಲಿಕಲ್ಲು ಅಥವಾ ಇತರ ವಸ್ತುಗಳು ಹೊರಬರುವುದನ್ನು ತಡೆಯಲು ಮತ್ತು ಇತರ ಜನರಿಗೆ ತೊಂದರೆಯಾಗದಂತೆ ತಡೆಯಲು ಈ ನೆಟ್ ಗಳನ್ನು ಹಾಕಲಾಗಿತ್ತದೆ. ಜೊತೆಗೆ ಹಸಿರು ಬಣ್ಣವು ಕಟ್ಟಡವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಕಟ್ಟಡದಲ್ಲಿ ಹೆಚ್ಚು ನೀರು ಹೀರಲ್ಪಡುತ್ತದೆ.

ಸಾಮಾನ್ಯವಾಗಿ ಕೆಲವು ದೊಡ್ಡ ಯೋಜನೆಗಳಲ್ಲಿ, ಕಟ್ಟಡ ಸಿದ್ಧವಾಗುವವರೆಗೆ ಈ ಹಸಿರು ಬಣ್ಣದ ನೆಟ್ ಬಳಸಲಾಗುತ್ತದೆ. ಮೂಲಭೂತವಾಗಿ, ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶ ಇದರ ಹಿಂದಿದೆ.

ಈಗ ಪ್ರಶ್ನೆ ಏನೆಂದರೆ ಹಸಿರು ಬಣ್ಣವೇ ಏಕೆ? ಬಿಳಿ, ಕಪ್ಪು, ನೀಲಿ, ಹಸಿರು ಹೀಗೆ ಯಾವುದೇ ಬಣ್ಣಕ್ಕೆ ಹೋಲಿಸಿದರೆ ಬಹಳ ದೂರದಿಂದ ಹಸಿರು ಬಣ್ಣ ಕಾಣುತ್ತದೆ. ಇದು ಸೂರ್ಯನ ಕಿರಣಗಳನ್ನು ಪ್ರತಿಫಲಿಸಲು ಸಹ ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!