WHY SO? | ಅಂಗೈ ಬೆವರುವುದು ಯಾಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಮಾಹಿತಿ!

ಬೇಸಿಗೆಯ ದಿನಗಳಲ್ಲಿ ಮೈಯಿಂದ ಬೆವರು ಬರುವುದು ಸಹಜ. ಮುಖ್ಯವಾಗಿ ನಮ್ಮ ಅಂಗೈಗಳು, ಪಾದಗಳು ಮತ್ತು ಕಂಕುಳಲ್ಲಿ ಹೆಚ್ಚು ಬೆವರುತ್ತದೆ. ಆದರೆ ಕೆಲವೊಬ್ಬರಿಗೆ ಬೇಸಿಗೆ ಮಾತ್ರವಲ್ಲ ಪ್ರತಿಯೊಂದು ಋತುವಿನಲ್ಲೂ ಹೆಚ್ಚಾಗಿ ಬೆವರುತ್ತಾರೆ ಮುಖ್ಯವಾಗಿ ಕೈ ಮತ್ತು ಪಾದಗಳಲ್ಲಿ. ಇದಕ್ಕೆ ಕಾರಣ ಏನು ಗೊತ್ತಾ? ಇಲ್ಲಿದೆ ಉತ್ತರ.

ಅತಿಯಾದ ಬೆವರುವಿಕೆಯನ್ನು ಹೈಪರ್‌ಹೈಡ್ರೋಸಿಸ್ ಎಂದು ಕರೆಯುತ್ತಾರೆ. ಇದರಲ್ಲಿ ಎರಡು ವಿಧಗಳಿವೆ. ಪ್ರಾಥಮಿಕ ಹೈಪರ್‌ಹೈಡ್ರೋಸಿಸ್ ಮತ್ತು ದ್ವಿತೀಯಕ ಹೈಪರ್‌ಹೈಡ್ರೋಸಿಸ್. ಪ್ರಾಥಮಿಕ ಹೈಪರ್ಹೈಡ್ರೋಸಿಸ್ ಸಾಮಾನ್ಯವಾಗಿದೆ. ಇದು ಬಾಲ್ಯದಿಂದಲೂ ಜೆನೆಟಿಕ್ಸ್, ಕಾಲೋಚಿತ ಬದಲಾವಣೆ, ಆತಂಕ, ಕೋಪ, ಪರಿಸರದ ಅಂಶಗಳು ಇತ್ಯಾದಿ ಭಾವನಾತ್ಮಕ ಸನ್ನಿವೇಶಗಳಲ್ಲಿ ಉಂಟಾಗುತ್ತದೆ.

ಸೆಕೆಂಡರಿ ಹೈಪರ್‌ಹೈಡ್ರೋಸಿಸ್ ರೋಗದ ಸಂಕೇತವಾಗಿದೆ. ಅಂದರೆ ಥೈರಾಯ್ಡ್ ಹಾರ್ಮೋನ್ ಕೊರತೆ, ಮಧುಮೇಹ ಇತ್ಯಾದಿ. ಇವು ಸ್ವಲ್ಪ ಗಂಭೀರ ಸಮಸ್ಯೆಗಳಾಗಿದೆ. ಇದಕ್ಕಾಗಿ ಆಂಟಿಪೆರ್ಸ್ಪಿರಂಟ್ ಕ್ರೀಮ್ ಲಭ್ಯವಿದೆ. ಇದನ್ನು ಕೈಗೆ ಹಚ್ಚಿಕೊಂಡರೆ ಬೆವರು ಬರುವುದನ್ನು ತಡೆಯುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಬೆವರು ನಿಮ್ಮ ಎಕ್ರಿನ್ ಗ್ರಂಥಿಗಳಿಂದ (ಬೆವರು ಗ್ರಂಥಿಗಳು) ಬಿಡುಗಡೆಯಾಗುವ ವಾಸನೆಯಿಲ್ಲದ ದ್ರವವಾಗಿದೆ. ಬೆವರಿನ ಕೆಲಸವೆಂದರೆ ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವುದು ಮತ್ತು ಅಧಿಕ ಬಿಸಿಯಾಗುವುದನ್ನು ತಡೆಯುವುದು. ಈ ಬೆವರು ಗ್ರಂಥಿಗಳು ಅತಿಯಾಗಿ ಕೆಲಸ ಮಾಡುವುದರಿಂದ ಹೈಪರ್‌ಹೈಡ್ರೋಸಿಸ್ ಉಂಟಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!