ಬೇಸಿಗೆಯಲ್ಲಿ ತಾಪಮಾನ ಹೆಚ್ಚು. ನಮ್ಮ ದೇಹವು ಯಾವಾಗಲೂ ಹೈಡ್ರೇಟ್ ಆಗಿರಬೇಕು. ಹೀಗಾಗಿ ಸಿಕ್ಕ ಸಿಕ್ಕ ಆಹಾರಗಳನ್ನು ನಾವು ಸೇವಿಸಬಾರದು. ಇವತ್ತು ಯಾವ ರೀತಿಯ ಆಹಾರಗಳನ್ನು ನಾವು ಸೇವಿಸಬಾರದು ಅಂತ ನೋಡೋಣ.
ಕಾಫಿ
ನಮ್ಮ ದೇಹವು ಹೆಚ್ಚು ಉಷ್ಣವಾದರೆ ರೋಗರುಜಿನಗಳು ಕಟ್ಟಿಟ್ಟ ಬುತ್ತಿ. ಕಾಫಿ ನಮ್ಮ ದೇಹಕ್ಕೆ ಹೆಚ್ಚು ಉಷ್ಣದ ಅಂಶವನ್ನು ನೀಡುತ್ತದೆ. ಹಾಗಾಗಿ ಆದಷ್ಟು ಕಾಫಿಯಿಂದ ದೂರವಿರಿ.
ಜಂಕ್ ಫುಡ್
ನಮ್ಮ ದೇಹವನ್ನು ನಿರ್ಜಲೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಜಂಕ್ ಫುಡ್ ನಿಂದ ಆದಷ್ಟು ದೂರವಿರಿ.
ಮಿಲ್ಕ್ ಶೇಕ್ ಮತ್ತು ಸಕ್ಕರೆ
ಹೆಚ್ಚು ಕ್ಯಾಲೋರಿಗಳಿಂದ ತುಂಬಿರುವಂತಹ ಈ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಈ ವಸ್ತುಗಳು ನಮ್ಮ ದೇಹದಲ್ಲಿರುವಂತಹ ನೀರಿನ ಅಂಶವನ್ನು ಹೀರಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಉಪ್ಪಿನಕಾಯಿ
ಇದರಲ್ಲಿ ಸೋಡಿಯಂ ಪ್ರಮಾಣ ಹೆಚ್ಚು ಇರೋದ್ರಿಂದ ಬೇಸಿಗೆಯ ಸಮಯದಲ್ಲಿ ಉಪ್ಪಿನಕಾಯಿಯನ್ನ ತಿನ್ನುವುದು ಕಮ್ಮಿ ಮಾಡಿ.